Advertisement
ವಿಪಕ್ಷಗಳ ಧರಣಿ ನಡುವೆಯೇ ಅತಿವೃಷ್ಟಿ ಕುರಿತು ಕಾಂಗ್ರೆಸ್‌ನ ಎ.ಎಸ್. ಬೋಪಣ್ಣ ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆಡಳಿತ ಪಕ್ಷದ ಸದಸ್ಯರು ಬೆಳಕು ಚೆಲ್ಲಿದರು. ಬಳಿಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸಂಪೂರ್ಣ ಹಾನಿಯಾದ ಮನೆಗೆ ಪರಿಹಾರ ಕೊಡುವುದಷ್ಟೇ ಅಲ್ಲದೆ ಸರಕಾರದಿಂದಲೇ ಮನೆ ಮಂಜೂರು ಮಾಡಿಕೊಡಲು ನಿರ್ಧರಿಸಿದ್ದೇವೆ ಎಂದರು.
ಅಂಕೋಲಾ-ಶಿರೂರು ಸಮೀಪ ಹೆದ್ದಾರಿ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ವಿನ್ಯಾಸವೇ ಕಾರಣ ಎಂಬ ವರದಿ ಇದೆ. ಹೆದ್ದಾರಿ ನಿರ್ಮಾಣಕ್ಕೆ ಅಡ್ಡಲಾಗಿದ್ದ ಗುಡ್ಡವನ್ನು ಹಂತ-ಹಂತವಾಗಿ ಇಳಿಜಾರಿನಂತೆ ಮಾಡುವ ಬದಲು ಕಡಿದಾಗಿ 90 ಡಿಗ್ರಿ ಕೋನದಲ್ಲಿ ಕತ್ತರಿಸಿದ್ದಾರೆ. ಇದರಿಂದ ಕುಸಿತ ಉಂಟಾಗಿದೆ ಎಂದರು.
Related Articles
ನಾಪೋಕ್ಲು-ಮೂರ್ನಾಡು, ಮಡಿಕೇರಿ-ಕಗ್ಗೊàಡ್ಲು ಸೇರಿ ಹಲವೆಡೆ ಮಣ್ಣು ಕುಸಿದಿದ್ದು ಕಳಸ-ಹೊರನಾಡು ದಾರಿ ಬಂದ್ ಆಗಿದೆ. ಸಕಲೇಶಪುರ, ಮಡಿಕೇರಿಯ ಕೆಲವೆಡೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಕಡಲ್ಕೊರೆತ ತಡೆಗೆ ಮೀನುಗಾರಿಕಾ ಸಚಿವರಿಂದ ವಿಶೇಷ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಚಿವರು ಹೇಳಿದರು.
Advertisement
722 ಹೆಕ್ಟೇರ್ ಬೆಳೆ ನಷ್ಟ: ಕೃಷ್ಣಬೈರೇಗೌಡನೇತ್ರಾವತಿ, ಫಲ್ಗುಣಿ, ಕುಮಾರಾಧಾರಾ ನದಿಗಳು ಪ್ರವಾಹ ಸ್ಥಿತಿಯಲ್ಲಿವೆ. ಅತಿವೃಷ್ಟಿಯಿಂದ 371 ಹೆಕ್ಟೇರ್ ಕೃಷಿ ಮತ್ತು 351 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಆಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಬಹುದು. ತತ್‌ಕ್ಷಣ ಪರಿಹಾರ ಕೊಡಲು ಸೂಚಿಸಿದ್ದು, ಪೋರ್ಟಲ್ ಕೂಡ ತೆರೆಯುತ್ತೇವೆ ಎಂದು ಕೃಷ್ಣಬೈರೇಗೌಡ ಹೇಳಿದರು. “ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದೆ. ಅಂದಿನಿಂದ ಸರಕಾರ ಏನು ಮಾಡುತ್ತಿದೆ. ಯಾವ ಮಂತ್ರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ? ಎಷ್ಟು ಸಭೆ ಮಾಡಿದ್ದಾರೆ? ಎಷ್ಟು ಪರಿಹಾರ ಕೊಟ್ಟಿದ್ದಾರೆ. ಈ ಸರಕಾರದಿಂದ ಏನೂ ಆಗುತ್ತಿಲ್ಲ.” -ಆರ್.ಅಶೋಕ್, ವಿಪಕ್ಷ ನಾಯಕ “ಪೂರ್ಣ ಮನೆ ಹಾಳಾಗಿದ್ದಕ್ಕೆ 1.25 ಲಕ್ಷ ರೂ. ಪರಿಹಾರ ಕೊಡಲಾಗುತ್ತಿದೆ. ಇದನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು. ಅಡಿಕೆ ಬೆಳೆಗಾರರಿಗೆ ಹೊರೆಯಾಗಿರುವ ಮೈಲುತುತ್ತವನ್ನು ಸರಕಾರ ಉಚಿತವಾಗಿ ಕೊಡಬೇಕು. ಕಡಲಬದಿಯ ಮನೆಯಲ್ಲಿರುವವರಿಗೆ ಪುನರ್ವಸತಿ ಕಲ್ಪಿಸಿ, ಕಡಲಕೊರೆತದಿಂದ ರಕ್ಷಣೆ ನೀಡಿ.”-ಅಶೋಕ್ ರೈ, ಪುತ್ತೂರು ಶಾಸಕ