Advertisement

ನೀತಿ ಸಂಹಿತೆ ಬಿಸಿ: ಇಂದಿನಿಂದ ನಿರಾಳ

10:09 AM May 27, 2019 | Team Udayavani |

ಉಡುಪಿ: ಅಂತೂ 2019ರ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಪೂರ್ಣ
ಗೊಂಡಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಸೋಲು- ಗೆಲುವಿನವರೆಗಿನ ಲೆಕ್ಕಾಚಾರಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಆದರೂ ಚುನಾವಣೆ ನಿಮಿತ್ತ ವಿಧಿಸಿದ್ದ ಮಾದರಿ ನೀತಿ ಸಂಹಿತೆಯು ಜನಪ್ರತಿನಿಧಿಗಳು ಸಹಿತ ಜನಸಾಮಾನ್ಯರಿಗೆ ಇರಿಸುಮುರಿಸು ಮಾಡಿದ್ದಂತೂ ಹೌದು.

Advertisement

ಮಾ. 10ರಿಂದ ಮಾದರಿ ನೀತಿ ಸಂಹಿತೆ ಆರಂಭ ಗೊಂಡಿದ್ದು, ಮೇ 27ರ ವರೆಗೆ ಮುಂದುವರಿಯಲಿದೆ. ಈ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿತ್ತು.

ಸರಕಾರಿ ವಾಹನ ಬಳಸುವಂತಿರಲಿಲ್ಲ
ನೀತಿ ಸಂಹಿತೆ ಜಾರಿಯಾದಾಗಿನಿಂದ ರಾಜಕಾರಣಿಗಳು ಸರಕಾರಿ ವಾಹನಗಳನ್ನು ಬಳಸುವಂತಿರಲಿಲ್ಲ. ಚುನಾವಣೆ ಗಾಗಿ ಸರಕಾರಿ ಅಥವಾ ಸ್ಥಳೀಯ ಸಂಸ್ಥೆಗಳ ನೌಕರರ ಸೇವೆ ಬೇಕೆಂದು ಚುನಾವಣಾ ಪ್ರಾಧಿಕಾರದಿಂದ ಕೋರಿಕೆ ಬಂದಲ್ಲಿ ಮಾತ್ರ ಆದ್ಯತೆಯ ಮೇರೆಗೆ ನೀಡಬಹುದಿತ್ತು.

ಅಧಿಕಾರಿಗಳಿಗೆ ಅಧಿಕಾರ
ಚುನಾವಣೆ ಸಂದರ್ಭ ರಾಜಕಾರಣಿಗಳು ಸರಕಾರಿ ಕೆಲಸಗಳನ್ನು ನಿರ್ವಹಿಸಲು ಅನುಕೂಲ ವಾತಾವರಣವನ್ನು ಅಧಿಕಾರಿಗಳು ಕಲ್ಪಿಸಿಕೊಡಬೇಕಿತ್ತು. ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸದಿದ್ದರೆ ಇದನ್ನು ಚುನಾವಣಾ ಪ್ರವಾಸ ಎಂದು ಅಂದಾಜಿಸಲಾಗುತ್ತದೆ.

ಯೋಜನೆ ವಿಳಂಬ
ಚುನಾವಣ ಆಯೋಗವು ಚುನಾವಣೆ ಘೋಷಣೆ ದಿನಾಂಕ ಪ್ರಕಟಿಸಿ ಮುಗಿಯುವ ತನಕ ಯಾವುದೇ ಹೊಸ ಯೋಜನೆ, ಘೋಷಣೆಗಳನ್ನು ಕೈಗೊಳ್ಳುವಂತಿರಲಿಲ್ಲ. ಚುನಾವಣೆ ಪೂರ್ವ ಕೈಗೊಂಡ ಯೋಜನೆಗಳನ್ನಷ್ಟೇ ಮುಂದುವರಿಸಲು ಅವಕಾಶವಿತ್ತು. ಬಜೆಟ್‌ನಲ್ಲಿ ಯೋಜನೆ ಅಂಗೀಕಾರವಾಗಿದ್ದರೂ ಅನುಷ್ಠಾನಗೊಳಿಸುವಂತಿರಲಿಲ್ಲ. ಜನ ಸಾಮಾನ್ಯರಿಗೂ ತೊಂದರೆ ಮನೆ, ಹಾಲ್‌ಗ‌ಳಲ್ಲಿ ಸಭೆ, ಸಮಾರಂಭ ನಡೆಸಲೂ ಪೊಲೀಸರ ಅನುಮತಿಯನ್ನು ಕಡ್ಡಾಯವಾಗಿ ಪಡೆಯ ಬೇಕಿತ್ತು. ಅನುಮತಿ ಪಡೆಯದೆ ಸಮಾರಂಭಗಳನ್ನು ಆಯೋಜಿಸುವಂತಿರಲಿಲ್ಲ. ಅಲ್ಲದೆ ಖಾಸಗಿ ಸಮಾರಂಭಗಳಲ್ಲಿ ರಾಜಕಾರಣಿಗಳೂ ಪ್ರವೇಶಿಸುವಂತಿರಲಿಲ್ಲ.

Advertisement

ಸಂಸದ, ಶಾಸಕರ ಕಚೇರಿಗೂ ಬೀಗ
ಚುನಾವಣೆ ನೀತಿಸಂಹಿತೆ ಜಾರಿಯಾಗುತ್ತಿದ್ದಂತೆ ಸಂಸದರ, ಶಾಸಕರ, ಜಿ.ಪಂ., ತಾ.ಪಂ., ಗ್ರಾ.ಪಂ. ಅಧ್ಯಕ್ಷರ ಕಚೇರಿ, ಸರಕಾರಿ ಕಾಮಗಾರಿಗಳಲ್ಲಿ ರಾಜಕಾರಣಿಗಳ ಹೆಸರು ಇದ್ದ ಕಡೆಯೆಲ್ಲ ಅದನ್ನು ಮುಚ್ಚಲಾಗಿತ್ತು.
ನೀತಿ ಸಂಹಿತೆ ಮುಗಿದ ತತ್‌ಕ್ಷಣ ಇದನ್ನು ತೆರವುಗೊಳಿ ಸಲಾಗುತ್ತದೆ. ಜನಸಾಮಾನ್ಯರು ಈ ಅವಧಿಯಲ್ಲಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅಹವಾಲು ಸ್ವೀಕರಿ ಸುವಂತಿರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಅಧಿಕಾರಿಗಳು ಉತ್ತರದಾಯಿಗಳಾಗಿದ್ದರು.

ನೇಮಕ, ವರ್ಗಾವಣೆ ಇಲ್ಲ
ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಸೇವೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಿಬಂದಿ ಬೇಕಾಗುತ್ತಿತ್ತು. ಇದನ್ನು ಕಾರ್ಯಗತ ಗೊಳಿಸಲು  ಚುನಾವಣ ಆಯೋಗದೊಂದಿಗೆ  ಸಮಾಲೋಚನೆ ನಡೆಸದೆ ನೌಕರರನ್ನು ವರ್ಗಾವಣೆ ಮಾಡುವಂತಿಲ್ಲ. ತುರ್ತು ಸಂದರ್ಭದಲ್ಲಿ 1ರಿಂದ 2 ದಿನವಷ್ಟೇ ರಜೆ ನೀಡಲು ಅವಕಾಶವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next