Advertisement

ಕುಲಭೂಷಣ್‌ಗೆ ಸಿಗುತ್ತಾ ಬಿಡುಗಡೆ ಭಾಗ್ಯ?

12:51 AM Jul 17, 2019 | mahesh |

ದ ಹೇಗ್‌: ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿರುವ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದ ತೀರ್ಪು ಅಂತಾರಾಷ್ಟ್ರೀಯ ನ್ಯಾಯಾ ಲಯದಿಂದ (ಐಸಿಜೆ) ಬುಧವಾರ ಹೊರಬೀಳಲಿದೆ.

Advertisement

ಹೇಗ್‌ನಲ್ಲಿನ ಶಾಂತಿ ಭವನದಲ್ಲಿ (ಪೀಸ್‌ ಪ್ಯಾಲೇಸ್‌) ನಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಬುಧವಾರ ಸಂಜೆ 6.30ಕ್ಕೆ ಪ್ರಕರಣದ ಅಂತಿಮ ಸುತ್ತಿನ ವಿಚಾರಣೆ ಆರಂಭವಾಗಲಿದ್ದು, ಮುಖ್ಯ ನ್ಯಾಯಮೂರ್ತಿ ಅಬ್ದುಲ್‌ಖಾವಿ ಅಹ್ಮದ್‌ ಯೂಸುಫ್ ಅವರು, ತೀರ್ಪನ್ನು ಪ್ರಕಟಿಸಲಿದ್ದಾರೆ. ಜು.17ರಂದು ತೀರ್ಪು ಪ್ರಕಟವಾಗುವುದಾಗಿ ಇದೇ ತಿಂಗಳ ಆರಂಭದಲ್ಲೇ ಐಸಿಜೆ ಹೇಳಿತ್ತು.

ಜಾಧವ್‌ ಭಾರತೀಯ ಗೂಢಚಾರಿಯಾಗಿದ್ದು, ಪಾಕಿಸ್ಥಾನದಲ್ಲಿ ಭಯೋತ್ಪಾದನೆಗೆ ಪ್ರೇರೇಪಿಸುತ್ತಿದ್ದ ಎಂದು ಆರೋಪಿಸಿ ಪಾಕಿಸ್ಥಾನ ಸೇನಾ ನ್ಯಾಯಾಲಯ 2017ರ ಎಪ್ರಿಲ್‌ನಲ್ಲಿ ಜಾಧವ್‌ ಅವರಿಗೆ ಮರಣ ದಂಡನೆ ಶಿಕ್ಷೆ ನೀಡಿತ್ತು. ಇದನ್ನು ಭಾರತ, ಅಂತಾ ರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದೆ. 2017ರ ಮೇ 8ರಿಂದ ಅಲ್ಲಿ ವಿಚಾರಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next