Advertisement

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿ

07:53 PM May 28, 2021 | Team Udayavani |

ತುಮಕೂರು: ಕೊರೊನಾ ಮಹಾಮಾರಿಯಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಕೊರೊನಾ ಸಂಕಷ್ಟದಲ್ಲಿ ನೆರವಾಗಬೇಕು ಎಂದುಗ್ರಾಮಾಂತರ ಶಾಸಕ ಡಿ .ಸಿ .ಗೌರಿಶಂಕರ್‌ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

Advertisement

ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ,ಹೆಗ್ಗೆರೆ ಮಲ್ಲಸಂದ್ರ ವ್ಯಾಪ್ತಿಯ 400 ಆಶಾ ಹಾಗೂಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತರೇಷನ್‌ ಕಿಟ್‌, ಮಾಸ್ಕ್ , ಸ್ಯಾನಿಟೈಸರ್‌, ಫೇಸ್‌ಶೀಲ್ಡ…, ವಿತರಿಸಿ ಮಾತನಾಡಿದ ಅವರು, ಕಳೆದವರ್ಷ ಕೊರೊನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಪ್ರೋತ್ಸಾಹಧನ ನೀಡಲಿಲ್ಲ, ಪ್ರೋತ್ಸಾಹ ಧನಕ್ಕೆಒತ್ತಾಯಿಸಿ ಪ್ರತಿಭಟನೆ ಮಾಡಿದಾಗ ಸರ್ಕಾರಪೊಲೀಸ್‌ ಬಲ ಬಳಸಿ ಪ್ರತಿಭಟನೆ ಹತ್ತಿಕ್ಕಲಾಯಿತು.ಈಗ ಕೊರೊನಾ 2ನೇ ಅಲೆಯಲ್ಲಿ ಆಶಾಕಾರ್ಯಕರ್ತೆಯರನ್ನೇ ಸೇವೆಗೆ ಬಳಸಿಕೊಳ್ಳುತ್ತಿದೆ.ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಆಶಾ ಕಾರ್ಯಕರ್ತೆಯರಿಗೆ ಶೀಘ್ರವಾಗಿ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಸರ್ಕಾರಕ್ಕೆ ಟ್ವಿಟ್‌ ಮಾಡಿ ಮನವಿಮಾಡಿದ್ದಾರೆ.

ಸರ್ಕಾರ ಶೀಘ್ರವಾಗಿ ಪೋÅತ್ಸಾಹ ಧನಬಿಡುಗಡೆ ಮಾಡಿ ಆಶಾ ಕಾರ್ಯಕರ್ತೆಯರಕುಟುಂಬಕ್ಕೆ ಆಸರೆಯಾಗುವಂತೆ ಆಗ್ರಹಿಸಿದರು.ತಹಶೀಲ್ದಾರ್‌ ಹಾಗೂ ತಾಲೂಕು ಪಂಚಾಯ್ತಿಇಒ ಅವರಿಂದ ಕೊರೊನಾ ಸೋಂಕಿತರ ಪಟ್ಟಿ ತರಿಸಿಕೊಂಡು ಅವರಿಗೆ ಉಚಿತ ರೇಷನ್‌ ಕಿಟ್‌ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಗ್ರಾಮಾಂತರಕ್ಷೇತ್ರಕ್ಕೆ ಎಲ್ಲ ಸೇವೆ ಮಾಡಲು ಸಿದ್ಧ ಎಂದರು.

ಆಕ್ಸಿಜನ್ಬೆಡ್ಸೇವೆ ಲಭ್ಯ: ಕೋಡಿಮುದ್ದನಹಳ್ಳಿಯಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ30 ಬೆಡ್‌ಗಳ ಆಕ್ಸಿಜನ್‌ ಬೆಡ್‌ ಸೇವೆ ಲಭ್ಯವಾಗಲಿದೆ. ಕ್ಷೇತ್ರದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಹಾಗೆಯೇ ಕೋವಿಡ್‌ ಕೇರ್‌ಸೆಂಟರ್‌ ನಲ್ಲಿರುವ ರೋಗಿಗಳಿಗೆ ,ಮಾಸ್ಕ್ , ಊಟ,ಕಷಾಯ ಎಲ್ಲ ರೀತಿ ಸೌಕರ್ಯ ಒದಗಿಸಲಾಗುತ್ತಿದೆ. ಅದೇ ರೀತಿ ಕೋವಿಡ್‌ ಕೇರ್‌ ಸೆಂಟರ್‌ಗೆಸ್ವಂತವಾಗಿ 10 ಲಕ್ಷ ರೂ.ವೆಚ್ಚದಲ್ಲಿ ಔಷಧಖರೀದಿಸಿ ನೀಡಿರುವುದಾಗಿ ಹೇಳಿದರು. ತಾಲೂಕುಜೆಡಿಎಸ್‌ ಅಧ್ಯಕ್ಷ ರಾಮಚಂದ್ರಪ್ಪ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ, ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆಗೌರಮ್ಮ, ವೈದ್ಯಾಧಿಕಾರಿ ಡಾ.ರಾಧಾಕೃಷ್ಣ, ಆರಕ್ಷಕ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next