Advertisement
ಮೂರು ವಿಭಾಗವಾಗಿ ಸಿದ್ಧಪಡಿಸಿದ್ದ ದೋಷಾರೋಪ ಪಟ್ಟಿಯನ್ನು ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಡಿ.ವಿ.ಸದಾನಂದಗೌಡ, ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್ ಮೊದಲಾದವರು ಭಾನುವಾರ ಮಲ್ಲೇಶ್ವರದಲ್ಲಿ ಬಿಡುಗಡೆ ಮಾಡಿದರು.
Related Articles
Advertisement
ಕೃಷಿ, ಕೈಗಾರಿಕೆ ಮತ್ತು ಸೇವಾ ವಲದಯ ನಿರಂತರ ಕುಸಿತದ ಬಗ್ಗೆಯೂ ತಿಳಿಸಿದ್ದಾರೆ. ನೀರಾವರಿ ಯೋಜನೆಗೆ ಕೋಟ್ಯಂತರ ರೂ. ವ್ಯಯಿಸಿದರೂ ನೀರು ಮಾತ್ರ ಬರಲಿಲ್ಲ. ಸಣ್ಣ ನೀರಾವರಿಯಲ್ಲಿ ದೊಡ್ಡ ಭ್ರಷ್ಟಾಚಾರ, ರಾಜಕೀಯ ಉದ್ದೇಶಕ್ಕಾಗಿ ಸಾಲಮನ್ನಾ ಹೀಗೆ ರಾಜ್ಯ ಸರ್ಕಾರ ವೈಫಲ್ಯಗಳನ್ನು ಬಣ್ಣಬಣ್ಣದ ಹಾಳೆಗಳಲ್ಲಿ ಪಟ್ಟಿಮಾಡಿ ಜನರ ಮುಂದೆ ಇಟ್ಟಿದ್ದಾರೆ.
ಬೆಂಗಳೂರಿಗೆ ಸಂಚಕಾರ: ಕಾಂಗ್ರೆಸ್ ಆಳ್ವಿಕೆಯಲ್ಲಿ ಬೆಂಗಳೂರಿನ ಕೆರೆಯೂ ಹೊತ್ತಿ ಉರಿದಿದೆ. ರಾಜ್ಯದ ರಾಜಧಾನಿ ಬೆಂಗಳೂರು ಡ್ರಗ್ಸ್ ರಾಜಧಾನಿಯಾಗಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾದ ಬಗೆ, ಕಸ ನಿರ್ವಹಣೆ ಎಂಬ ಲಂಚಕೂಪ, ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಹೋದ ಮಾನ, ಹೆಚ್ಚಿದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಗ್ರಾಮೀಣಾಭಿವೃದ್ಧಿ ಶೂನ್ಯ, ಅತ್ಯಾಚಾರ, ಅಪಹರಣಗಳಿಂದ ನರಳುತ್ತಿರುವ ಮಕ್ಕಳು, ಒಳಚರಂಡಿ ವ್ಯವಸ್ಥೆ ಸರ್ವನಾಶ, ಟ್ರಾಫಿಕ್ ಜಾಮ್‌ಜಾಮ್, ನಗರದಲ್ಲಿ ಕಾಂಗ್ರೆಸ್ ನಾಯಕರ, ಶಾಸಕರ ಪುತ್ರನ ಗೂಂಡಗಿರಿ, ಅನ್ನ ನೀಡುವ ಹೆಸರಿನಲ್ಲಿ ಅಕ್ರಮ ಎಂದು 64 ಹಗರಣ ಪಟ್ಟಿ ಮಾಡಲಾಗಿದೆ.
ಶಾಸಕರ ಮಕ್ಕಳ ದರ್ಪ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿ, ರೈತರ ಆತ್ಮಹತ್ಯೆ, ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳು, ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಟಾಳಿಕೆ ಸೇರಿ ಕಾನೂನು ಸುವ್ಯವಸ್ಥೆಯ ಲೋಪ, ರೈತರ ಆತ್ಮಹತ್ಯೆ ಹಾಗೂ ಬೆಂಗಳೂರಿಗೆ ಸಂಚಕಾರ ಈ ಮೂರು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ವೈಫಲ್ಯದ ಜಾರ್ಜ್‌ಶೀಟ್ ಸಿದ್ಧವಾಗಿದೆ. -ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ