ಹೊಸದಿಲ್ಲಿ: ನೀರಿನ ಒಳ ಹರಿವು ಜಲಾಶಯಗಳಲ್ಲಿ ಬಂದಲ್ಲಿ ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ನದಿ ನೀರನ್ನು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಗಳವಾರ ಆದೇಶಿಸಿದೆ.ಮಳೆ ಬರದೆ ಒಳಹರಿವು ಬರದೇ ಹೋದಲ್ಲಿ ನೀರು ಬಿಡಬೇಕಾಗಿಲ್ಲ ಎಂದು ಷರತ್ತಿನಲ್ಲಿ ಸಡಿಲಿಕೆ ಮಾಡಲಾಗಿದೆ.
ದೆಹಲಿಯ ಜಲಮಂಡಳಿ ಕಚೇರಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಮಂಗಳವಾರ ನಡೆದಿದ್ದು, ಕರ್ನಾಟಕ, ತಮಿಳುನಾಡು, ಕೇರಳ , ಪುದುಚೇರಿ ಮತ್ತು ಕೇದ್ರ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
4 ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಗಳಲ್ಲಿ 14 ಟಿಎಂಸಿ ನೀರು ಮಾತ್ರ ಬಳಕೆ ಯೋಗ್ಯವಾಗಿದೆ.
ಪ್ರಾಧಿಕಾರದ ಆದೇಶದಿಂದ ಕರ್ನಾಟಕ ಸದ್ಯಕ್ಕೆ ನೀರು ಬಿಡಬೇಕಾದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ನೀರಿನ ತೀವ್ರ ಅಭಾವವಿದ್ದು, ಜನ, ಜಾನುವಾರುಗಳು ನೀರಿಗಾಗಿ ಪರದಾಡುತ್ತಿದ್ದು ರಾಜ್ಯದಲ್ಲಿ ರೈತರ ಬೆಳೆಗಳು ಒಣಗಿ ಹೋಗಿವೆ.
ಜೂನ್ ಅಂತ್ಯದೊಳಗೆ 9.25 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ತಮಿಳು ನಾಡು ಮನವಿ ಸಲ್ಲಿಸಿತ್ತು.