ಹೊಸದಿಲ್ಲಿ : ಚುನಾವಣೆ ಹೊತ್ತಲ್ಲಿ ತಮಿಳುನಾಡಿಗೆ 4 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ರಾಜ್ಯಕ್ಕೆ ತಾಕೀತು ಮಾಡಿದೆ. ಚುನಾವಣೆ ಹೊತ್ತಲ್ಲಿ ತಮಿಳುನಾಡಿಗೆ 4 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ರಾಜ್ಯಕ್ಕೆ ತಾಕೀತು ಮಾಡಿದ್ದು, ಈಗಾಗಲೇ ಚುನಾವಣಾ ಕಾವು ಏರಿದ್ದು ರಾಜ್ಯ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧಿಸಿ ವಿಚಾರಣೆ ನಡೆಯುತ್ತಿರುವ ವೇಳೆ ತಮಿಳು ನಾಡು ಸರ್ಕಾರದ ಪರ ವಕೀಲರು ಏಕಾಏಕಿ ಕುಡಿಯಲು ನೀರು ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮನವಿ ಆಧರಿಸಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 4 ಟಿಎಂಸಿ ನೀರು ಬಿಡಬೇಕು ಎಂದು ಆದೇಶ ನೀಡಿದ್ದಾರೆ. ಕೋರ್ಟ್ ಈ ಬಗ್ಗೆ ಮಧ್ಯಾಹ್ನ ಲಿಖಿತ ಆದೇಶ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ರಾಜ್ಯದ ವಕೀಲರು ಆದೇಶಕ್ಕೆ ಉತ್ತರಿಸಿದ್ದು, ನಮ್ಮಲ್ಲಿ ಕುಡಿಯುವ ನೀರಿಗೂ ತತ್ವಾರ ಇದೆ . ಇಷ್ಟು ಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಬಗ್ಗೆ ರಾಜ್ಯದ ವಕೀಲರು ಅಫಿಡವಿತ್ ಸಲ್ಲಿಸಲಿದ್ದು, ಮುಂದಿನ ಮಂಗಳವಾರಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.
ಕೆಆರ್‌ಎಸ್‌ನಲ್ಲಿ ಸದ್ಯ 72.46 ಅಡಿ ನೀರಿದ್ದು, 4 ಟಿಎಂಸಿ ನೀರು ಬಿಟ್ಟರೆ ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವುದು ಖಚಿತ.