ಮಾತ್ರ ಜೋಳಿಗೆಯಲ್ಲಿ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಇದನ್ನೇ ನೆಗೆಟೀವ್ ಸಿಂಡ್ರೋಮ್ ಅನ್ನೋದು.
Advertisement
ಎಷ್ಟೋ ಜನರ ಒಳಗೆ, ಒಬ್ಬ ಅದ್ಭುತ ಚಿತ್ರಕಲಾವಿದನೋ, ಸಂಗೀತಗಾರನೋ, ನಟನೋ ಇರುತ್ತಾನೆ. ಅದನ್ನು ಗುರುತಿಸದೇ, ಸಣ್ಣದೊಂದು ಸೋಲಿಗೇ ಹೆದರಿ, ಬದುಕು ಮುಗಿದೇ ಹೋಯ್ತು ಎಂಬಂತೆ ಪರಿತಪಿಸುತ್ತಾರೆ. ಅಂದಹಾಗೆ, ನೆಗೆಟೀವಿಟಿ ಏಕೆ ಬರುತ್ತದೆ ಗೊತ್ತಾ? ಆತ್ಮವಿಶ್ವಾಸದ ಕೊರತೆಯಿಂದ ಹೀಗಾಗುತ್ತದೆ. ಬದುಕಿನಲ್ಲಿ ನಡೆದ ಯಾವುದೋ ಕಹಿ ಘಟನೆ, ನೆಗೆಟೀವ್ ಥಿಂಕ್‌ಗೆ ದಾರಿ ಮಾಡುತ್ತದೆ. ಇಂಥದೊಂದು ಯೋಚನೆ ಜೊತೆಯಾಗಿ ಬಿಟ್ಟರೆ ಅಪಾಯ. ಹೀಗಾಗಿ, ಬಿ- ಪಾಸಿಟೀವ್ ಆಗಿರೋದು ಅಂದರೆ, ನಮ್ಮ ತಪ್ಪುಗಳನ್ನು ತಿದ್ದುವ, ನಮ್ಮನ್ನು ಹುರಿದುಂಬಿಸುವ ಗೆಳೆಯರ ಪಡೆ ಕಟ್ಟಿ ಕೊಳ್ಳೋದು. ಪ್ರತಿ ತಪ್ಪುಗಳನ್ನು ಗುರುತು ಮಾಡಿಕೊಂಡು, ಅವು ಮರುಕಳಿಸದಂತೆ ನೋಡಿಕೊಳ್ಳುವುದು.
ಮನೆ ಸರೋಜ ಏನೇನೆಲ್ಲಾ ಮಾಡಿದಳು ಗೊತ್ತಾ? ಎಂಬಂಥ ಮಾತುಗಳಿಗೆ, ಕಿವಿ ಯನ್ನು ಬಂದ್ ಮಾಡುವುದು. ನಮ್ಮದಲ್ಲದ, ನಮಗೆ ಬೇಕಿಲ್ಲದ ವಿಷಯಗಳಿಗೆ ಮನಸ್ಸು ತೆರೆದಿಡುವುದನ್ನು ನಿಲ್ಲಿಸಿಬಿಡಬೇಕು. ಮನಸ್ಸಿನಲ್ಲಿ ಜಗದ ನೆಗೆಟೀವ್ ಸುದ್ದಿಗಳೆಲ್ಲ ಬಂದು ಕೂತಾಗಲೇ, ನಮ್ಮ ಬಗ್ಗೆ ನಮಗೇ ಕೀಳರಿಮೆ ಉಂಟಾಗಿ, ನಮ್ಮಲ್ಲಿನ ಪಾಸಿಟೀವ್ ವಿಚಾರಗಳು ಕಾಣದೇ ಹೋಗುತ್ತವೆ. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳು ಏನೇನು ಅನ್ನುವುದರ ಪಟ್ಟಿ ಮಾಡಿ. ಪಾಸಿಟೀವ್, ನೆಗೆಟೀವ್ ಅನ್ನೋದು, ಬಿಳಿ ಮತ್ತು ಕೆಂಪು ರಕ್ತ ಕಣ ಇದ್ದಂತೆ. ಎರಡೂ ಇದ್ದರೇನೇ ಜೀವನ. ಆದರೆ, ನೆಗೆಟಿವಿಟಿ ನಮ್ಮನ್ನು ಆಳಬಾರದು ಅನ್ನೋ ಎಚ್ಚರಿಕೆ ಇರಲಿ.