ಉಡುಪಿ : ಇಲ್ಲಿನ ಕುಕ್ಕಿಕಟ್ಟೆ ವಿದ್ಯಾರ್ಥಿ ನಿಲಯದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಸರೋಜ ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರಕ್ಕೆ ಇವರ ಸಂಬಂಧಿಗಳು ಯಾರಾದರು ಇದ್ದರೆ ಬರುವಂತೆ ಯುವ ಮುಖಂಡ ಅಮೃತ್ ಶೆಣೈ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಬರೆದುಕೊಂಡಿರು ಅಮೃತ್, ಸರೋಜ, ಪ್ರಸ್ತುತ ಉಡುಪಿ ಕುಕ್ಕಿಕಟ್ಟೆ ವಿದ್ಯಾರ್ಥಿನಿ ನಿಲಯದ ಉದ್ಯೋಗಿಯಾಗಿದ್ದರು. ನನಗೆ ದಶಕಗಳ ಪರಿಚಯ , ಒಳಕಾಡು ಶಾಲೆಯಲ್ಲಿ ಅಂಗನವಾಡಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ತನಗೆ ಹಿಂದೆ ಮುಂದೆ ಯಾರೂ ಇಲ್ಲ ವೃದ್ದಾಪ್ಯದಲ್ಲಿ ನನಗೆ ನೀವೇ ಒಂದು ಸಣ್ಣ ಮನೆ ಮಾಡಿಕೊಡಬೇಕು ಎಂದಿದ್ದರು.
ನಾನು, ಸ್ವಲ್ಪ ವರ್ಷ ಹೋಗಲಿ ಏನಾದರೂ ವ್ಯವಸ್ಥೆ ಮಾಡೋಣ ಅನ್ನುತ್ತಿದ್ದೆ. ನಿವೇಶನರಹಿತರಿಗೆ ನಿವೇಶನ ನೀಡುವ ಸರಕಾರದ ಯೋಜನೆಯಲ್ಲಿ ಇವರ ಹೆಸರಿನಲ್ಲಿ ಅರ್ಜಿ ಹಾಕಿ ತುಂಬಾ ಪ್ರಯತ್ನ ಮಾಡಿದರೂ ಕೊನೆ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ಅಸಾಧ್ಯವಾಯಿತು.
ಕೆಲವು ದಿನಗಳ ಹಿಂದೆ ನನಗೆ ಕರೆ ಮಾಡಿ ತನಗೆ ಸೌಖ್ಯ ಇಲ್ಲಾ , ಡಾಕ್ಟರ್ ಮದ್ದು ಕೊಟ್ಟಿದ್ದಾರೆ ಅಂದಿದ್ದರು ಎರಡು ದಿನಗಳ ಬಳಿಕ ನನಗೆ ಮತ್ತೆ ಕರೆ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ತಿಳಿಸಿ ಅಂದಿದ್ದೆ. ಸಾಮಾನ್ಯವಾಗಿ ಅವರು ಆರೋಗ್ಯವಾಗಿ ಇರುತ್ತಿದ್ದ ಕಾರಣಕ್ಕೆ ನಾನು ಜಾಸ್ತಿತಲೆ ಕೆಡಿಸಿಕೊಳ್ಳಲಿಲ್ಲ.
ಇಂದು ಇವರು ನಿಧನರಾಗಿದ್ದಾರೆ. ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇವರ ಶವವನ್ನು ಇಡಲಾಗುವುದು. ಸಂಪರ್ಕಕ್ಕೆ ಸಿಕ್ಕಿದ ಇವರ ಸಹೋದರಿ ಓರ್ವರು ಕಾರಣಾಂತಗಳಿಂದ ತನಗೆ ಬರಲಾಗುವುದಿಲ್ಲ ಹಾಗೂ ಯಾವುದೇ ಜವಾಬ್ದಾರಿ ವಹಿಸಲಾಗುವುದಿಲ್ಲ ಅಂದಿದ್ದಾರೆ.
ಇನ್ನು ಯಾರಾದರೂ ಸಂಬಂಧಿಗಳಿದ್ದರೆ ದಯವಿಟ್ಟು ಸಂಪರ್ಕಿಸಿ, ಇಲ್ಲವಾದರೆ ಸಮಾಜಸೇವಕ ಅನ್ಸರ್ ಅಹಮ್ಮದ್ ಅವರ ತಂಡ ಸರಕಾರಿ ನಿಯಮಾವಳಿಗಳ ಪ್ರಕಾರ ಶವ ಸಂಸ್ಕಾರ ಮಾಡಲಿರುವರು. ಇವರ ಸಾವು ವೈಯಕ್ತಿಕ ವಾಗಿ ನನಗೆ ಅತೀವ ಬೇಸರ ಉಂಟು ಮಾಡಿದೆ. ನನ್ನನ್ನು ತುಂಬಾ ಅಭಿಮಾನದಿಂದ ಕಾಣುತ್ತಿದ್ದ ಇವರು , ನಾನು ಕರೆದಾಗಲೆಲ್ಲಾ ನನಗೂ ಸಣ್ಣ ಪುಟ್ಟ ಸಹಾಯ ಮಾಡುತ್ತಾ ಇದ್ದರು. ಸರೋಜಾ ಟೀಚರ್ ಗೆ ಭಾವ ಪೂರ್ಣ ಶ್ರದ್ದಾಂಜಲಿ ಎಂದು ಅಮೃತ್ ಬರೆದುಕೊಂಡಿದ್ದಾರೆ.