Advertisement

ಉಗ್ರವಾದದಿಂದ ಚೀನ-ಪಾಕ್‌ ಬಾಂಧವ್ಯಕ್ಕೂ ಬಿತ್ತು ಪೆಟ್ಟು

10:40 AM Jun 11, 2017 | Team Udayavani |

ಬೀಜಿಂಗ್‌: ನೆರೆ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ ಹಾಗೂ ಚೀನ ನಡುವಿನ ಮಾತುಕತೆ ಸುದ್ದಿ ಯಾಗದ ದಿನಗಳಿಲ್ಲ. ಹಾಗೇ ಮಾತುಕತೆ ನಡೆಸದೇ ಇದ್ದರೂ ಅಷ್ಟೇ ಚರ್ಚೆಗೆ ಕಾರಣವಾಗುವುದುಂಟು.

Advertisement

ಶಾಂಘಾç ಸಹಕಾರ ಒಕ್ಕೂಟ ಶೃಂಗದಲ್ಲಿ ಪಾಲ್ಗೊಳ್ಳಲು ಕಜಕಿಸ್ತಾನ ಭೇಟಿ ವೇಳೆ ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸಿ, ಪಾಕ್‌ ಪ್ರಧಾನಿ ನವಾಜ್‌ ಶರೀಫ್ ಜತೆ ಮಾತುಕತೆ ನಡೆಸದೇ ಇರುವುದೇ ಈಗ ಎರಡೂ ದೇಶಗಳ ಸಂಬಂಧ ಹಳಸಲಿಕ್ಕೆ ಕಾರಣವಾಗಿದೆ ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ. 

ಬಲೂಚಿಸ್ತಾನದ ಗಡಿಯಲ್ಲಿ ಇಬ್ಬರು ಚೀನಿಯರನ್ನು ಉಗ್ರರು ಹತ್ಯೆಗೈದಿರುವ ಹಿನ್ನೆಲೆ ಮುನಿಸಿ ಕೊಂಡಿರುವ ಜಿನ್‌ಪಿಂಗ್‌, ಇದೇ ಕಾರಣಕ್ಕಾಗಿ ಷರೀಫ್ ಜತೆ ಮಾತುಕತೆಗೆ ಮುಂದಾಗಿಲ್ಲ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಕೂಡ ಇತ್ತೀಚೆಗಿನ ದಿನಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನದ ಉಪಟಳ ಎಲ್ಲೆ ಮೀರಿದ್ದರಿಂದ ಷರೀಫ್ ಅವರೊಂದಿಗೆ ಕುಶಲೋಪರಿ ಮಾತುಕತೆ ನಡೆಸಿದರೇ ಹೊರತು, ಬೇರಿನ್ನಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next