Advertisement
ರವಿವಾರ ಹೊಸದಿಲ್ಲಿಗೆ ಆಗಮಿಸಿದ್ದ ಮುಯಿಜ್ಜು ಅವರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಬಳಿಕ ಪ್ರಧಾನಿ ಮೋದಿ ಅವರನ್ನು ಮುಯಿಜ್ಜು ಭೇಟಿಯಾಗಿದ್ದಾರೆ. ಈ ವೇಳೆ ಸಾಗರ ಭದ್ರತೆ, ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
Related Articles
ಭಾರತದಿಂದ ಮಾಲ್ದೀವ್ಸ್‌ಗೆ ತೆರಳುವ ಹಾಗೂ ಅಲ್ಲಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಣಕಾಸು ವಹಿವಾಟು ಸುಲ ಭ ಗೊಳಿಸುವ ನಿಟ್ಟಿನಲ್ಲಿ ಭಾರತದ ರುಪೇ ಕಾರ್ಡ್ ಗಳನ್ನು ಮಾಲ್ದೀವ್ಸ್ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.
ಜನೌಷಧಿ ಕೇಂದ್ರ:
ಉಭಯ ರಾಷ್ಟ್ರಗಳ ನಡುವಿನ ಆರೋಗ್ಯ ಸಹಕಾರದ ಭಾಗವಾಗಿ ಮಾಲ್ದೀವ್ಸ್ ಜನತೆಗೆ ಗುಣಮಟ್ಟದ ಜನೆರಿಕ್ ಔಷಧಿಗಳನ್ನು ಒದಗಿಸಿಕೊಡುವುದಕ್ಕಾಗಿ ಮಾಲ್ದೀವ್ಸ್‌ನಾದ್ಯಂತ ಜನೌ ಷಧಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
Advertisement
ಭಾರತದ ಭದ್ರತೆಗೆ ಧಕ್ಕೆ ತರುವುದಿಲ್ಲ: ಅಧ್ಯಕ್ಷ ಮುಯಿಜ್ಜುಚೀನಪರ ನಿಲುವುಗಳಿಂದಲೇ ಪ್ರಖ್ಯಾತರಾಗಿ ರುವ ಮುಯಿಜ್ಜು ಭಾರತ ಭೇಟಿ ವೇಳೆ ತಮ್ಮ ವರಸೆ ಬದಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು “ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರ. ಮಾಲ್ದೀವ್ಸ್ ಮೊದಲು ಎನ್ನುವ ನೀತಿ ನಮ್ಮದಾದರೂ ಭಾರತವನ್ನು ಆದ್ಯತೆಯಾಗಿ ಪರಿಗಣಿಸುವುದನ್ನು ನಿಲ್ಲಿಸುವುದಿಲ್ಲ. ನಮ್ಮ ದೇಶದ ಅಭಿವೃದ್ಧಿಗಾಗಿ ವಿದೇಶಗಳೊಂದಿಗೆ ನಾವು ಸಹಕಾರ ಹೆಚ್ಚಿಸಿಕೊಳ್ಳಬೇಕಿದೆ. ಆದರೆ ನಮ್ಮ ನಿಲುವುನಿಂದ ಭಾರತದ ಭದ್ರತೆಗೂ ಧಕ್ಕೆ ಬಾರದಂತೆ ಖಾತರಿಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.