Advertisement
ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…– ಡಾ| ಎನ್. ಗೋಪಾಲಕೃಷ್ಣ
Related Articles
Advertisement
ಇಲ್ಲಿ ಹೊಟ್ಟೆಪಾಡಿಗೆ ಕೂಲಿ ಕೆಲಸವೇನೋ ದೊರೆಯಿತು. ಆದರೆ ಇಲ್ಲಿಯೂ ಅದೇ ರೀತಿಯ ಕನಸುಗಳು ಬೀಳತೊಡಗಿದವು. ಇದರಿಂದ ಹತಾಶನಾದ ರಾಜು ದೊಡ್ಡ ಬಂಡೆಯೊಂದನ್ನು ಹತ್ತಿ, ಅಲ್ಲಿಂದ ಕೆಳಗೆ ಹಾರಿ, ಪ್ರಾಣ ಕಳೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದ.
ಒಂದು ಭಾರೀ ಬಂಡೆಯನ್ನು ಏರಿ ನೋಡಿದಾಗ ಅವನಿಗೆ ಅಚ್ಚರಿಯಾಯಿತು. ತಾನು ಕನಸಿನಲ್ಲಿ ಕಾಣುತ್ತಿದ್ದ ಬಂಡೆ ಅದೇ ಆಗಿತ್ತು! ಅಲ್ಲಿ ಓಡಾಡುತ್ತಿದ್ದ ಪ್ರವಾಸಿಗರು ಬಂಡೆಯ ಮೇಲಿರುವ ವ್ಯಕ್ತಿಯನ್ನು ಕಂಡು ಆಶ್ಚರ್ಯಪಟ್ಟರು. ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು? ಕೆಳಗೆ ಇಳಿದು ಬಂದ ರಾಜುವಿಗೆ ಅಂದಿನಿಂದ ರಾತ್ರಿ ವಿಚಿತ್ರ ಕನಸು ಬೀಳುವುದು ನಿಂತುಹೋಯಿತಂತೆ. ಬಳಿಕ ಅವನು ಚಿತ್ರದುರ್ಗದ ಬೆಟ್ಟವನ್ನು ಏರಿ, ಇಳಿಯುವ ಕೆಲಸವನ್ನೇ ನಿತ್ಯದ ಉದ್ಯೋಗನ್ನಾಗಿ ಮಾಡಿಕೊಂಡು ಪ್ರವಾಸಿಗರನ್ನು ಆಕರ್ಷಿಸಲಾರಂಭಿಸಿದ. ರಾಜುವಿನ ಹಿಂದಿನ ಜನ್ಮ ಏನಾಗಿದ್ದಿತೆಂದು ಆಧ್ಯಾತ್ಮಿಕ ಸಾಧಕರು ಪತ್ತೆ ಮಾಡಿದ್ದಾರೆ. ಗತಜನ್ಮದಲ್ಲಿ ರಾಜು ಇದೇ ಚಿತ್ರದುರ್ಗದ ಕೋಟೆಯಲ್ಲಿದ್ದ ಇಲ್ಲಿನ ಮಂಗಳಿಗೆ ನಾಯಕನಾಗಿದ್ದ. ಅಕಸ್ಮಾತ್ ಹಾವೊಂದು ಕಚ್ಚಿದ್ದರಿಂದ ಸತ್ತು ಹೋಗಿದ್ದ. ಈಗ ಮನುಷ್ಯನಾಗಿ ಮರುಜನ್ಮ ತಾಳಿ ಚಿತ್ರದುರ್ಗಕ್ಕೆ ಬಂದಿದ್ದಾನೆ. ಇಲ್ಲಿರುವ ಕೋತಿಗಳೆಲ್ಲ ಇವನ ಸ್ನೇಹಿತರೇ ಆಗಿಬಿಟ್ಟಿವೆ. ರಾಜು ಕೂಡ ತನ್ನ ಪ್ರವಾಸಿಗರಿಂದ ಸಿಗುವ ಹಣದ ಹೆಚ್ಚಿನ ಭಾಗವನ್ನು ಕೋತಿಗಳಿಗಾಗಿಯೇ ಖರ್ಚು ಮಾಡುತ್ತಿದ್ದಾನೆ. ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!