Advertisement

ಇದು ಬೆಂಗಳೂರಿನ “ಪ್ರೈಡ್‌’ರೈಸ್‌

10:44 AM Jul 07, 2019 | Team Udayavani |

ಯುವಕ-ಯುವತಿಯರಿಗಾಗಿ ಉದ್ಯೊಗಮೇಳಗಳು ನಡೆಯುವುದು ಸರ್ವೇ ಸಾಮಾನ್ಯ. ನಗರ- ಹಳ್ಳಿಗಳೆಂಬ ಭೇದವಿಲ್ಲದೆ, ಎಲ್ಲ ಕಡೆಯೂ ಜಾಬ್‌ಮೇಳ ನಡೆಯುತ್ತದೆ. ಇಂಥ ಮೇಳಗಳು, ಸಮಾಜದ ಮುಖ್ಯವಾಹಿನಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತವೆ. ಆದರೆ, ಸಮಾಜದ ಅವಗಣನೆಗೆ ಒಳಗಾಗಿರುವ ಮಂದಿಗೆ ಇದರ ಪ್ರಯೋಜನ ಸಿಗುವುದು ತೀರಾ ವಿರಳ.
ಆದರೆ, ಜುಲೈ 12ರಂದು ನಮ್ಮ ಬೆಂಗಳೂರು ವಿಶಿಷ್ಟ ಉದ್ಯೋಗಮೇಳಕ್ಕೆ ಸಾಕ್ಷಿಯಾಗಲಿದೆ.
ಪ್ರೈಡ್‌ ಸರ್ಕಲ್‌ ಸಂಘಟನೆ ವತಿಯಿಂದ, ದೇಶದಲ್ಲಿ ಇದೇ ಮೊದಲ ಬಾರಿಗೆ, ಸಲಿಂಗಿ ಹಾಗೂ ತೃತೀಯಲಿಂಗಿಗಳಿಗಾಗಿ ರೈಸ್‌ (Reimagining Inclusion for Social Equity) ಉದ್ಯೋಗಮೇಳ ನಡೆಯಲಿದೆ.

Advertisement

ಸಾವಿರ ಉದ್ಯೋಗ ಸೃಷ್ಟಿ
ಈ ಮೇಳದಲ್ಲಿ ಕೇವಲ ಕಚೇರಿ ಒಳಗಿನ (ವೈಟ್‌ ಕಾಲರ್‌) ಹುದ್ದೆಗಳ ಜೊತೆಗೆ, ದೈಹಿಕ ಪರಿಶ್ರಮ ಬೇಡುವ (ಬ್ಲೂ ಕಾಲರ್‌) ಹು¨ªೆಗಳಿಗೂ ಸಮಾನ ಪ್ರಾಧಾನ್ಯತೆ ನೀಡಲಾಗಿದೆ. ಎಲ್‌ಜಿಬಿಟಿ ಸಮೂಹದ ಒಂದು ಸಾವಿರ ಮಂದಿಗೆ ಉದ್ಯೋಗ ದೊರಕಿಸಿ ಕೊಡುವ ಮಹತ್ವಾಕಾಂಕ್ಷೆಯ ಗುರಿ ಮೇಳಕ್ಕಿದೆ. ಐಟಿ, ಬ್ಯಾಂಕಿಂಗ್‌, ಭದ್ರತೆ, ಮನೆಗೆಲಸ, ಆಡಳಿತ ಇತ್ಯಾದಿ ವಲಯಗಳಲ್ಲಿ ಭವಿಷ್ಯ ರೂಪಿಸಲು ಇಚ್ಛಿಸುವ ಎಲ್‌ಜಿಬಿಟಿ ಸಮುದಾಯದವರು ಭಾಗವಹಿಸಬಹುದು.

ಕಾರ್ಯಕ್ರಮದ ವಿವರ
ದಿನವಿಡೀ ನಡೆಯುವ ಈ ಮೇಳದಲ್ಲಿ 35ಕ್ಕೂ ಅಧಿಕ ಜಾಗತಿಕಮಟ್ಟದ ನಾಯಕರು, ಎಲ್‌ಜಿಬಿಟಿ ಸಮುದಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. 9 ವಿವಿಧ ವಿಷಯಗಳ ಬಗ್ಗೆ ವಿವಿಧ ಅವಧಿಗಳಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಪ್ರಮುಖ ಕಾರ್ಪೋರೇಟ್‌ ಕಂಪನಿಗಳ ನುರಿತ ತಜ್ಞರು ಪ್ರಬಂಧಗಳನ್ನು ಮಂಡಿಸಲಿ¨ªಾರೆ.

ಈ ಉದ್ಯೋಗಮೇಳದಲ್ಲಿ 40-50 ಕಂಪನಿಗಳು ಭಾಗವಹಿಸಲಿವೆ.

ಉತ್ಪನ್ನ ಪ್ರದರ್ಶನ
ಎಲ್‌ಜಿಬಿಟಿ ಸಮೂಹದ ಸ್ವಯಂ ಉದ್ಯೋಗ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ, ಅವರು ತಯಾರಿಸಿದ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಲು ಮೇಳದಲ್ಲಿ ಅವಕಾಶವಿದೆ. ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ: https://tinyurl.com/y2edq8fb

Advertisement

ಎಲ್ಲಿ?: ಲಲಿತ್‌ ಅಶೋಕ್‌ ಹೋಟೆಲ್‌, ಕುಮಾರಕೃಪ ರಸ್ತೆ
ಯಾವಾಗ?: ಜು. 12, ಶುಕ್ರವಾರ

ಪ್ರೈಡ್‌ ಸರ್ಕಲ್‌
ಎಲ್‌ಜಿಬಿಟಿ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರನ್ನೂ ನಮ್ಮಂತೆಯೇ ನೋಡುವ ಆಶಯದಿಂದ 2017ರಲ್ಲಿ ಪ್ರಾರಂಭಗೊಂಡ ವೇದಿಕೆ ಇದು. ಶ್ರೀನಿ ರಾಮಾಸ್ವಾಮಿ ಮತ್ತು ರಾಮಕೃಷ್ಣ ಎಂಬುವರ ನೇತೃತ್ವದಲ್ಲಿ ನಾಲ್ಕು ಸದಸ್ಯರ ಬಲದಿಂದ ಶುರುವಾಗಿ, ಸದ್ಯ 600ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಪ್ರೈಡ್‌ ಸರ್ಕಲ್‌ನ ಸದಸ್ಯತ್ವ ಉಚಿತವಾಗಿದ್ದು, ಯಾರು ಬೇಕಾದರೂ ಸದಸ್ಯರಾಗಬಹುದು. 80ಕ್ಕೂ ಹೆಚ್ಚು ಕಾರ್ಪೋರೇಟ್‌ ಕಂಪನಿಗಳು ಸರ್ಕಲ್‌ನ ಚಟುವಟಿಕೆಗಳಲ್ಲಿ ಸಹಭಾಗಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next