Advertisement

ಪುನರ್ವಸತಿ ಯೋಜನೆ: ದಲಿತರಿಗೆ ಪರಿಹಾರ ನೀಡಿ

03:55 PM Aug 19, 2019 | Suhan S |

ಆಲೂರು: ಹೇಮಾವತಿ ಪುನರ್ವಸತಿ ಯೋಜನೆಯಲ್ಲಿ ಮೀಸಲಿರುವ 100 ಎಕರೆ ಪ್ರದೇಶದಲ್ಲಿ 20 ಎಕರೆ ಭೂಮಿಯನ್ನು ದಲಿತರಿಗೆಂದು ತಾಲೂಕಿನ ಬೂದನಹಳ್ಳಿ ಗ್ರಾಮದಲ್ಲಿ ಮೀಸಲಿಟ್ಟು 20 ವರ್ಷ ಕಳೆದಿದ್ದರೂ ಅದನ್ನು ಹಸ್ತಾಂತರಿಸುವಲ್ಲಿ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ತಾಲೂಕಿನ ದಲಿತ ಮುಖಂಡರು ಆಪಾದಿಸಿದರು.

Advertisement

ತಾಲೂಕು ಆಡಳಿತದಿಂದ ಏರ್ಪ ಡಿಸಿದ್ದ ಪರಿಶಿಷ್ಟರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡರು, ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಕೂಡಲೇ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಶಿರೀನ್‌ತಾಜ್‌, ಈಗಾಗಲೇ 6 ತಿಂಗಳ ಹಿಂದೆಯೇ ಇದಕ್ಕೆ ಬದಲಾಗಿ ಬೇರೆ ಸ್ಥಳವನ್ನು ಗುರುತಿಸಿ ಮಾರ್ಕ್‌ ಮಾಡಿ ಸಂಬಂಧಿಸಿದ ಕಡತಗಳನ್ನು ಸಕಲೇಶಪುರ ಉಪವಿಭಾಗಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕಕೂಡಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು.

ಶಾಸಕ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, ಮಂಜೂರಾತಿ, ಪಹಣಿ ಬದಲಾವಣೆ ಕುರಿತಂತೆ ಪ್ರತಿ ತಿಂಗಳು ತಹಶೀಲ್ದಾರ್‌ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸುವಂತೆ ತಹಶೀ ಲ್ದಾರ್‌ ಸೂಚಿಸಿದರು. ತಹಶೀಲ್ದಾರ್‌ ಶಿರೀನ್‌ ತಾಜ್‌ ಉತ್ತರಿಸಿ, ಈಗಾಗಲೆ ಕಸಬಾ ಹೋಬಳಿ ಹೊರತುಪಡಿಸಿ, ಮೂರು ಹೋಬಳಿ ಗಳಲ್ಲಿ ಗ್ರಾಮ ಸಭೆ ನಡೆಸಲಾಗಿದೆ ಎಂದರು.

ಎಸ್‌ಬಿಐ ವ್ಯವಸ್ಥಾಪಕರ ವಿರುದ್ಧ ಕ್ರಮ: ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಕಣತೂರು ಶಾಖೆಯಲ್ಲಿ ಎಸ್ಸಿ,ಎಸ್ಟಿ ಫ‌ಲಾನುಭವಿಗಳಿಗೆ ಸರ್ಕಾರ ದಿಂದ ಮಂಜೂರಾದ ನೀಡಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ಕೊಡುತ್ತಿಲ್ಲ. ಕೇಳಲು ಹೋದರೆ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡುತ್ತಾರೆ. ಸರಕಾರದ ಯೋಜನೆಗೆ ಸಾಲ ಕೊಡಲು ಗ್ಯಾರಂಟಿ ಕೊಡಬೇಕು ಎನ್ನುತ್ತಾರೆ. ಈ ಕಾರಣದಿಂದ ಹಲವು ಯೋಜನೆಗಳಲ್ಲಿ ಪ್ರೋತ್ಸಾಹಧನ ಸರಕಾರಕ್ಕೆ ವಾಪಾಸು ಹೋಗಿದೆ. ಪಶುಭಾಗ್ಯ ಯೋಜನೆಗೆ ಸಹಕರಿಸುತ್ತಿಲ್ಲ. ಕೂಡಲೇ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ಈರಪ್ಪ, ಬಸವರಾಜು, ರಂಗಯ್ಯ, ಅರಸಯ್ಯ, ವೆಂಕಟಯ್ಯ ಇತರರು ಆಗ್ರಹಿಸಿದರು.

Advertisement

ಶಾಸಕ ಎಚ್. ಕೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬ್ಯಾಂಕಿನವರು ಫಲಾನುಭ ವಿಗಳಿಗೆ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ತಕ್ಷಣ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಭೇಟಿ ಮಾಡಿ ತೊಂದರೆ ನಿವಾರಣೆ ಮಾಡಬೇಕು. ಮುಂದಿನ ಸಭೆಗೆ ಪ್ರತಿಯೊಂದು ಬ್ಯಾಂಕಿನ ವ್ಯವಸ್ಥಾಪಕರು, ಲೀಡ್‌ ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಹಾಜ ರಾಗಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಗ್ರತೆ ವಹಿಸ ಬೇಕು ಎಂದು ಮೋಹನ್‌ ಅವರಿಗೆ ಸೂಚಿಸಿದರು.

ತಾಲೂಕಿನ ಬೂದನಹಳ್ಳಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಗಂಗಾಕಲ್ಯಾಣ ಯೋಜನೆಯಲ್ಲಿ ಕೊರೆದ ಕೊಳವೆ ಬಾವಿಗಳಿಗೆ ಕೂಡಲೇ ಮೋಟಾರ್‌ ಅಳ ವಡಿಸಬೇಕು ಎಂದು ಸಭೆಯಲ್ಲಿ ಒತ್ತಾ ಯಿಸಲಾಯಿತು. ಸಭೆಯಲ್ಲಿ ತಾಪಂ ಇಒ ಸತೀಶ್‌, ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು, ಪಿಡಿಒಗಳು, ದಲಿತ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next