Advertisement
ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ಸಮಾರೋಪಾದಿ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಸ್ಥಳೀಯಾಡಳಿತ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಹಾಗೂ ನಿಯಂತ್ರಣ ಕಾರ್ಯಕ್ರಮಗಳು ನಡೆಯುತ್ತಿವೆ.
ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದ್ದರೂ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ ಕಂಡುಬರುತ್ತಿದೆ. ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮದಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ. ಕೆಲ ಗ್ರಾಮೀಣ ಭಾಗದಲ್ಲೂ ಶಂಕಿತ ಪ್ರಕರಣ ಕಂಡುಬಂದಿದ್ದರೂ ನಿಯಂತ್ರಣಕ್ಕೆ ಬಂದಿದೆ.
Related Articles
ಸುಳ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂ ಸಿದಂತೆ ದಾಖಲಾಗುವ ರೋಗಿಗಳಿಗಾಗಿ 20 ಬೆಡ್‌ನ ಪ್ರತ್ಯೇಕ ವಾರ್ಡ್ ವ್ಯವಸ್ಥೆಯಿದೆ. ಕೋವಿಡ್ ಸಮಯದಲ್ಲಿ ಕೋವಿಡ್ ವಾರ್ಡ್ ಇದಾಗಿದ್ದು, ಪ್ರಸ್ತುತ ಸಾಂಕ್ರಾಮಿಕ ರೋಗಕ್ಕೆ ಸಂಬಂ ಧಿಸಿ ದಾಖಲಾಗುವ ರೋಗಿಗಳಿಗಾಗಿ ಈ ವಾರ್ಡ್ ಅನ್ನು ಮೀಸಲಿರಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ರಕ್ತ ತಪಾಸಣೆಗೂ ವ್ಯವಸ್ಥೆ ಇದೆ. ಡೆಂಗ್ಯೂ ಖಚಿತ ಪ್ರಕರಣಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಎಲೈಸಾ ಟೆಸ್ಟ್ ಮಾಡಲಾಗುತ್ತದೆ.
Advertisement
ನಿಯಂತ್ರಣಕ್ಕೆ ಕ್ರಮಡೆಂಗ್ಯೂ ಪ್ರಕರಣ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದ್ದು, ಸುಳ್ಯ ನಗರದಲ್ಲಿ ತಿಂಗಳ ಮೊದಲ ಹಾಗೂ 3ನೇ ಶುಕ್ರವಾರ ಲಾರ್ವೆ ಸಮೀಕ್ಷೆ ಹಾಗೂ ಲಾರ್ವೆ ನಾಶ ಕಾರ್ಯ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರತೀ ಶುಕ್ರವಾರ ಡ್ರೈ ಡೇ ಕಾರ್ಯಕ್ರಮದಲ್ಲಿ ಸ್ಥಳೀಯಾಡಳಿತದ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಲಾರ್ವೆ ಸರ್ವೆ, ಲಾರ್ವೆ ನಾಶ ಮಾಡಲಾಗುತ್ತಿದೆ. ಹಲವೆಡೆ ಕೊಳಚೆ ನೀರಿನ ಪ್ರದೇಶ
ಶುಚಿಗೊಲ್ಲದೇ ಸೊಳ್ಳೆ ಉತ್ಪತ್ತಿ ಆಗುತ್ತಿದ್ದು ಇದು ಒಂದೂ ಕಾರಣ ಆಗಿದೆ. ಇನ್ನು ಹಲವೆಡೆ ಮಳೆಗಾಲ ಆರಂಭಗೊಂಡಿದ್ದರೂ ಚರಂಡಿ ದುರಸ್ತಿ ಕಾರ್ಯ ನಡೆಸದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಇಂತಹ ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಾರಣವಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಆರಂಭ ಹಂತದಲ್ಲಿ ಜ್ವರ ಬಂದ ತತ್‌ಕ್ಷಣ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿ, ಔಷ ಧ ಪಡೆಯಬೇಕು. 3-4ನೇ ದಿನ ರಕ್ತ ಪರೀಕ್ಷೆ ಮಾಡಿ, 5-7ನೇ ದಿನ ರಕ್ತದ ಮಾದರಿ ಪರೀಕ್ಷಿಸಬೇಕು. ಡೆಂಗ್ಯೂ ಅಥವಾ ಜ್ವರ ಇರುವ ವ್ಯಕ್ತಿಗಳು ಔಷ ಧ ಪಡೆದು, ಧೈರ್ಯ, ಆತ್ಮವಿಶ್ವಾಸದಿಂದ ಇದ್ದು, 7 ದಿನಗಳ ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಸಾರ್ವಜನಿಕರ ಬೆಂಬಲ, ಸಹಕಾರದಿಂದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ.
– ಡಾ| ನಂದಕುಮಾರ್, ತಾಲೂಕು ಆರೋಗ್ಯಾಧಿಕಾರಿ ಸುಳ್ಯ