Advertisement

ದಿವ್ಯಾಂಗನಿಗೆ ವಿಮಾನ ಹತ್ತಲು ಅವಕಾಶ ನೀಡದ ಸಿಬ್ಬಂದಿ : ಕ್ಷಮೆಕೋರಿದ ಇಂಡಿಗೋ

12:30 AM May 10, 2022 | Team Udayavani |

ಹೊಸದಿಲ್ಲಿ: ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ದಿವ್ಯಾಂಗನೊಬ್ಬನನ್ನು ಆತನ ಪೋಷಕರೊಂದಿಗೆ ವಿಮಾನ ಹತ್ತಲು ಅವಕಾಶ ನೀಡದ ತನ್ನ ಸಿಬ್ಬಂದಿಯ ನಡವಳಿಕೆ ಬಗ್ಗೆ ಇಂಡಿಗೋ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಷಮೆ ಕೋರಿದ್ದಾರಲ್ಲದೆ, ಆ ದಿವ್ಯಾಂಗನಿಗೆ ವ್ಹೀಲ್‌ಚೇರ್‌ ಕೊಡಿಸುವುದಾಗಿ ಟ್ವಿಟರ್‌ನಲ್ಲಿ ಭರವಸೆ ನೀಡಿದ್ದಾರೆ.

Advertisement

ವಿಮಾನದ ಸಹ ಪ್ರಯಾಣಿಕರ ಸುರಕ್ಷತೆಯ ನೆಪವೊಡ್ಡಿ ಈ ದಿವ್ಯಾಂಗನಿಗೆ ವಿಮಾನ ಹತ್ತಲು ಸಿಬಂದಿ ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ತಾವೇ ಖುದ್ದಾಗಿ ಈ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next