Advertisement

ದೇಶಿ ಕಲೆ, ಕಲಾವಿದರ ದಾಖಲೀಕರಣ ಅವಶ್ಯ

12:09 PM Sep 25, 2018 | |

ಹುಮನಾಬಾದ: ದೇಸಿ ಕಲೆ, ಕಲಾವಿದರ ದಾಖಲೀಕರಣ ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಒಳಗೊಂಡಂತೆ ಸಂಬಂಧಿ ತ ಸಂಘ ಸಂಸ್ಥೆಗಳು ಪೂರಕ ಯೋಜನೆ ರೂಪಿಸಿ, ಸಂರಕ್ಷಿಸಲು ಶ್ರಮಿಸಬೇಕು ಎಂದು ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು. 

Advertisement

ಮಾಣಿಕನಗರದ ಮಾಣಿಕ್ಯ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ-2018-19ರ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅದಕ್ಕಾಗಿ ಸರ್ಕಾರದಿಂದ ಯಾವುದೇ ಸೌಲಭ್ಯ ಬೇಕಾದರೂ ಕಲ್ಪಿಸಿಕೊಡಲು ಯಾವತ್ತೂ ಸಿದ್ಧವಿರುವುದಾಗಿ ಹೇಳಿದರು.

ಚಿಕ್ಕವರಿದ್ದಾಗ ಮನೆಯಲ್ಲಿ ಅಜ್ಜಿ ಬೀಸುವ, ಕುಟ್ಟುವ ಮತ್ತು ಜೋಗುಳ ಹಾಡುವುದನ್ನು ಕೇಳಿದ್ದೆವು. ಈಗ ವಿದೇಶಿ ಸಂಸ್ಕೃತಿ ಪ್ರಭಾವ, ಮೊಬೈಲ್‌ ಪ್ರವೇಶದ ನಂತರ ಅವೆಲ್ಲವೂ ಕಣ್ಮರೆಯಾಗಿವೆ ಎಂದ ಅವರು, ಬಾಲ್ಯದಲ್ಲಿ ತಾವು ಆಡುತ್ತಿದ್ದ ಚಿಣ್ಣಿ ದಾಂಡು, ಗೋಟಿ, ಲಗೋರಿ, ಜಾರಣಿ, ಚಾರ್‌ ಫತ್ತರ್‌ ಎನ್ನುವ ವಿಶಿಷ್ಟ ದೇಶಿ ಆಟಗಳನ್ನು ಆಡುತ್ತಿದ್ದೆವು. 

ಅವೆಲ್ಲ ಈಗ ಸಂಪೂರ್ಣ ಕಣ್ಮರೆಯಾಗಿದ್ದು, ಚಿಕ್ಕ ಮಕ್ಕಳಿಂದ ವೃದ್ಧರವರೆಗಿನ ಎಲ್ಲರಿಗೂ ಕ್ರಿಕೆಟ್‌ ಹುಚ್ಚು ಅಂಟಿಕೊಂದೆ. ಇಂತಹ ದಿನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಸೌರಭ ಆಯೋಜಿಸಿರುವುದು ಪ್ರಶಂಸನೀಯ ಎಂದು ಹೇಳಿದರು.

ಮಾಣಿಕನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೊಲೀಸ್‌ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಸಾಹಿತಿಗಳಾದ ಡಿ.ಅಜೇಂದ್ರಸ್ವಾಮಿ, ಎಚ್‌.ಕಾಶಿನಾಥರೆಡ್ಡಿ ಕರ್ನಾಟಕ ಜಾನಪದ ಪರಿಷತ್‌ ಪ್ರಮುಖ ಶಶಿಧರ ಘಾವಲ್ಕರ್‌, ಗೋಂಧಳಿ ಗಾಯನ ಕಲಾವಿದ ಸಿದ್ರಾಮ ಡಿ.ವಾಗ್ಮಾರೆ, ಶರಣಬಸಪ್ಪ ಪಾರಾ ಇದ್ದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಪ್ರಾಸ್ತಾವಿಕ ಮಾತನಾಡಿ, ಚಿಗುರು ಯೋಜನೆಯಡಿ 7-15 ವರ್ಷದ ಮಕ್ಕಳಿಗೆ, 16-25ರ ವರೆಗಿನ ಯುವಕರಿಗೆ, ಸಾಂಸ್ಕೃತಿಕ ಸೌರಭ ಯೋಜನೆಯಡಿ ಹಿರಿಯ ಕಲಾವಿದರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಿದ್ದು, ಅರ್ಹ ಕಲಾವಿದರು ಯೋಜನೆ ಸದ್ಬಳಕೆ ಮಾಡಕೊಳ್ಳಬೇಕು ಎಂದರು. ಜಾನಪದ ಪರಿಷತ್‌ ಅಧ್ಯಕ್ಷ ಶರದ್‌ ಕುಮಾರ ನಾರಾಯಣಪೇಟಕರ್‌ ನಿರೂಪಿಸಿದರು. ಮಹಾವೀರ ಜಮಖಂಡಿ ವಂದಿಸಿದರು.

ಸಾಂಸ್ಕೃತಿಕ ಸೌರಭ: ಹೈ.ಕ. ಭಾಗದ ಜಾಕಿರ್‌ ಹುಸೇನ್‌ ಖ್ಯಾತಿಯ ಜನಾರ್ಧನ್‌ ವಾಗ್ಮಾರೆ ತಂಡದ ಹಿಂದೂಸ್ಥಾನಿ ವಾದ್ಯ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಲ್ಕಿಯ ಉಸ್ತಾದ್‌ ಶೇಖ್‌ ಹನ್ನುಮಿಯ್ಯ, ಯುವ ಕಲಾವಿದೆ ಆಶಾರಾಣಿ ಷಟಕಾರ ಸುಗಮ ಸಂಗೀತ, ಸಾಹಿತಿ, ಕಲಾವಿದ ಶಂಭುಲಿಂಗ ವಾಲೊªಡ್ಡಿ ಅವರ ಜನಪದ ಗೀತೆ, ಉಷಾ ಪ್ರಭಾಕರ ತಂಡದಿಂದ ನೃತ್ಯ ರೂಪಕ, ಸುರೇಶ ಸಂಗಡಿಗರ ನಾಟಕ, ಹಣಮಂತಪ್ಪ ನರಸಪ್ಪ ಕಠೊuಳ್ಳಿಕರ್‌ ತಂಡದ ಕಥಾ ಕೀರ್ತನ, ಸಿದ್ರಾಮ ವಾಗ್ಮಾರೆ ಅವರ ಗೋಂಧಳಿ ಪದ ಮೊದಲಾದವು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next