Advertisement
ಕೈಕುಂಜೆ ಮೆಸ್ಕಾಂ ಉಪವಿಭಾಗ ಬಿ.ಸಿ. ರೋಡ್ ಕಚೇರಿಯಲ್ಲಿ ಜೂ. 15ರಂದು ನಡೆದ ಮೆಸ್ಕಾಂ ಬಂಟ್ವಾಳ ನಂ. 1, ನಂ. 2 ಉಪವಿಭಾಗ ಜನಸಂಪರ್ಕ ಸಭೆಯಲ್ಲಿ ಅವರು ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ವಾಮದಪದವಿನಲ್ಲಿ ಮೆಸ್ಕಾಂ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ವಿದ್ಯುತ್ ಸ್ಪರ್ಶಿಸಿ ಜಾನುವಾರುಗಳು ಸಾಯುತ್ತಿವೆೆ. ಬಂಟ್ವಾಳ, ಕೊಡಂಬೆಟ್ಟು , ಅಜ್ಜಿಬೆಟ್ಟು ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 40 ವರ್ಷಗಳ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಪರಿಹಾರಕ್ಕೆ ಮೆಸ್ಕಾಂ ಸೂಕ್ತ ದಾಖಲೆಪತ್ರಗಳ ಬಳಿಕ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ತಂತಿಗಳ ಬದಲಾವಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಆದ್ಯತೆಯಲ್ಲಿ ನಡೆಸುವುದಾಗಿ ಮಂಜಪ್ಪ ತಿಳಿಸಿದರು.
ಗ್ರಾಮಾಂತರ ಮನೆಗಳಿಗೆ ವಿದ್ಯುತ್ ಮೀಟರ್ ರೀಡಿಂಗ್ ಮಾಡಲು ಸಿಬಂದಿ ಬಾರದೆ ಸತಾಯಿಸಲಾಗುತ್ತದೆ. ಒಮ್ಮೆಲೆ ಕೆಲವು ತಿಂಗಳ ಬಿಲ್ ನೀಡುವ ಮೂಲಕ ಪಾವತಿಗೆ ಸಮಸ್ಯೆ ಆಗುವಂತಾಗಿದೆ. ಬಿಲ್ ನೀಡುವಾಗ ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚುವರಿ ಬಿಲ್ ಬರುತ್ತದೆ. ಗ್ರಾಹಕರು ಅನಂತರ ಇಲಾಖೆಗೆ ಬಂದು ಬಿಲ್ ಪರಿಶೀಲನೆ ನಡೆಸಿ ಪರಿಹಾರ ಕಾಣುವಾಗ ಸಮಯ ಮುಗಿದಿರುತ್ತದೆ ಎಂದು ಗ್ರಾಹಕರೊಬ್ಬರು ದೂರಿದರು.
Related Articles
Advertisement
36 ದೂರು ಸಲ್ಲಿಕೆಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯಿಂದ ಒಟ್ಟು 36 ದೂರುಗಳನ್ನು ಅದಾಲತ್‌ನಲ್ಲಿ ದಾಖಲಿಸಲಾಗಿದೆ. ಅದರಲ್ಲಿ 20 ದೂರುಗಳು ಹಳೆ ತಂತಿಗಳನ್ನು ಬದಲಾಯಿಸುವುದು. 12 ದೂರುಗಳು ಸಮರ್ಪಕ ಬಿಲ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು, 2 ದೂರು ಲೈನ್ ಸ್ಥಳಾಂತರಕ್ಕೆ ಬೇಡಿಕೆ, 2 ದೂರುಗಳು ಲೋ ವೋಲ್ಟೆàಜ್ ಕುರಿತು ಸಲ್ಲಿಕೆಯಾಗಿದೆ. ಸಹಕರಿಸಿ
ಗ್ರಾಮೀಣ ಭಾಗದಲ್ಲಿ ನಿರ್ದಿಷ್ಟ ಸ್ಥಳವನ್ನು ಬಿಟ್ಟು ಕೃಷಿ ಮಾಡಬೇಕು. ಸಮಸ್ಯೆ ಬಂದಾಗ ಸೂಕ್ತ ಕ್ರಮ ಮಾಡುವಂತೆ ರೈತರಲ್ಲಿ ನಾವು ವಿನಂತಿಸುತ್ತೇವೆ. ಅದಕ್ಕಾಗಿ ಕರಪತ್ರ ಪ್ರಕಟಿಸಿ ನೀಡಲು ಎಲ್ಲ ಶಾಖಾಧಿಕಾರಿಗಳಿಗೆ ತಿಳಿಸಿದೆ. ಅಡಿಕೆ ತೋಟಕ್ಕೆ ಕೊಪರ್ ಸಲ್ಫೆàಟ್ ಸಿಂಪಡಣೆಯಿಂದ ವಿದ್ಯುತ್ ತಂತಿಗಳು ಕಾಲಕ್ರಮೇಣ ಹಾನಿಗೆ ಒಳಗಾಗುತ್ತವೆ. ರೈತರು ಮೆಸ್ಕಾಂ ಜತೆ ಸಹಕರಿಸಬೇಕು.
– ಮಂಜಪ್ಪ
ಸೂಪರಿಂಟೆಂಡೆಂಟ್ ಎಂಜಿನಿಯರ್