Advertisement

ನೋಂದಣಿ: ಯುಎಇ ಕನ್ನಡಿಗರಿಗೆ ಸೂಚನೆ

09:44 AM May 02, 2020 | mahesh |

ಮಂಗಳೂರು: ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ತಾಯ್ನಾಡಿಗೆ ಮರಳಲು ಬಯಸುವವರು ತಮ್ಮ ಹೆಸರನ್ನು ಕೆಎನ್‌ಆರ್‌ಐ ಫಾರಂನ (www.knriuae.com) ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಅಂಬಲತೆರೆ ತಿಳಿಸಿದ್ದಾರೆ.

Advertisement

ಗರ್ಭಿಣಿಯರು, ಕೆಲಸ ಕಳಕೊಂಡವರು, ಆರೋಗ್ಯ ಸಮಸ್ಯೆ ಇದ್ದವರು, ಸಂದರ್ಶನ ವೀಸಾದಲ್ಲಿ ಬಂದು ಸಮಯಕ್ಕೆ ಹಿಂದಿರುಗಲು ಸಾಧ್ಯವಾಗದೆ ಇದ್ದವರು, ವಯಸ್ಸಾದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಕೆಎನ್‌ಆರ್‌ಐ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತ ರಾಯಭಾರಿ ವೆಬ್‌ಸೈಟ್‌ನಲ್ಲಿ (www.cgidubai.gov.in) ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದಿದ್ದಾರೆ. ಕುಟುಂಬದಲ್ಲಿ ನಾಲ್ವರಿದ್ದಲ್ಲಿ ಪ್ರತ್ಯೇಕ ನೋಂದಾಯಿಸಬೇಕು. ಹಿಂದಿರುಗಲು ಸಕಾರಣ ನೀಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next