Advertisement
ಕೇರಳ ಹೈಕೋರ್ಟ್ ತೀರ್ಪಿನ ಪ್ರಕಾರ ಕೋವಿಡ್ ವ್ಯಾಪಿಸುವುದನ್ನು ತಡೆಯುವ ಉದ್ದೇಶದೊಂದಿಗೆ ತಪಾಸಣೆ ನಡೆಸಲಾಗುವುದು. ಆದರೆ ಗಡಿಗಳಲ್ಲಿ ಯಾರನ್ನೂ ತಡೆಯುವುದಿಲ್ಲ. ಬ್ಯಾರಿಕೇಡ್‌ಗಳು ಇರಿಸಲಾಗುವುದಿಲ್ಲ. ಪಾಸ್ ವ್ಯವಸ್ಥೆ ಏರ್ಪಡಿಸಲಾಗುವುದಿಲ್ಲ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಬರುವವರು ಕೋವಿಡ್-19 ಜಾಗ್ರತಾ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಗಡಿಗಳಲ್ಲಿ ತಪಾಸಣೆ ಮುಂದುವರಿಸಲು ತೀರ್ಮಾನಿಸಲಾಗಿದೆ.
ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು, ಕಂದಾಯ ಮತ್ತು ಆರೋಗ್ಯ ಅಧಿಕಾರಿ ಗಳಿಂದ ಪರಿಶೀಲನೆ ನಡೆಯಲಿದೆ. ಎಲ್ಲ 16 ಗಡಿಗಳಲ್ಲಿ ತಪಾಸಣೆ ಪುನರಾರಂಭ ಗೊಳ್ಳಲಿದೆ. ಪೊಲೀಸರ ಜತೆಗೆ, ಅರಣ್ಯ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ ಅಧಿಕಾರಿಗಳು ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ವಾರದ ಎಲ್ಲ ದಿನಗಳಲ್ಲಿ 24 ಗಂಟೆ ಕಾಲವೂ ತಪಾಸಣೆ ನಡೆಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.