Advertisement

ಎ. 28ರಿಂದ ಲಸಿಕೆಗೆ ನೋಂದಣಿ

12:34 AM Apr 23, 2021 | Team Udayavani |

ಹೊಸದಿಲ್ಲಿ: ನಿಮಗೆ 18 ವರ್ಷ ತುಂಬಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಾಗಿದ್ದೀರಾ? ಹಾಗಿದ್ದರೆ ಮುಂದಿನ ಬುಧವಾರದಿಂದಲೇ ಕೋವಿನ್‌ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಿ.

Advertisement

ಮೇ 1ರಿಂದ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಣೆ ಆರಂಭವಾಗಲಿದ್ದು, ಎ. 24ರಂದು ಅಂದರೆ, ಶನಿವಾರ ಕೋವಿನ್‌ ಪೋರ್ಟಲ್‌ ಸಿದ್ಧಗೊಳ್ಳಲಿದೆ. ಎ. 28ರಂದು ನೋಂದಣಿ ಆರಂಭವಾಗಲಿದೆ. ನೋಂದಣಿ, ಲಸಿಕೆ ಸ್ವೀಕಾರ ಪ್ರಕ್ರಿಯೆ ಮತ್ತು ದಾಖಲೆಗಳು ಈ ಹಿಂದಿನಂತೆಯೇ ಇರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಇದೇ ವೇಳೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ದಾಟಿದ ನಾಗರಿಕರಿಗೆ ಈಗಿರುವಂತೆ ಸರಕಾರಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ದೊರೆಯಲಿದೆ ಎಂದೂ ಇಲಾಖೆ ಹೇಳಿದೆ.

ಉಚಿತ ಲಸಿಕೆ ಘೋಷಿಸಿದ ರಾಜ್ಯಗಳು :

ಕೇರಳ, ಅಸ್ಸಾಂ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಗೋವಾ, ಉತ್ತರಪ್ರದೇಶ, ಛತ್ತೀಸ್‌ಗಢ, ಸಿಕ್ಕಿಂ ರಾಜ್ಯಗಳು ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿವೆ.

Advertisement

ನೋಂದಣಿ ಹೇಗೆ? :

cowin.gov.in ಲಾಗ್‌ ಇನ್‌ ಆಗಿ, ಮೊಬೈಲ್‌ ಸಂಖ್ಯೆ ನಮೂದಿಸಿ.

ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರುತ್ತದೆ.

ಒಟಿಪಿ ದಾಖಲಿಸಿ, “ವೆರಿಫೈ’ ಬಟನ್‌ ಒತ್ತಿ.

“ಲಸಿಕೆಗೆ ನೋಂದಣಿ’ ಪುಟ ತೆರೆಯುತ್ತದೆ. ಅಲ್ಲಿ ಫೋಟೋ ಇರುವ ಗುರುತಿನ ಚೀಟಿ ಸಹಿತ ವಿವರ ಭರ್ತಿ ಮಾಡಿ. ಪ್ರಶ್ನೆ ಗಳಿಗೆ “ಹೌದು’/”ಇಲ್ಲ’ ಎಂದು ಸೂಕ್ತ ಕ್ಲಿಕ್‌ ಮಾಡಿ.

ಇದನ್ನು ಭರ್ತಿ ಮಾಡಿದ ಬಳಿಕ ಕೆಳ ಬಲಭಾಗ ದಲ್ಲಿ “ನೋಂದಣಿ’ (ರಿಜಿಸ್ಟರ್‌) ಬಟನ್‌ ಒತ್ತಿ.

ಆಗ ಯಶಸ್ವಿ ನೋಂದಣಿ ಬಗ್ಗೆ ಸಂದೇಶ ಬರುತ್ತದೆ. “ಅಕೌಂಟ್‌ ಡಿಟೇಲ್ಸ್‌’ ಎಂಬ ಪುಟ ತೆರೆಯುತ್ತದೆ.

ಇಲ್ಲಿ ನೀವು ಲಸಿಕೆ ಪಡೆಯುವ ದಿನಾಂಕಕ್ಕೆ ಅಪಾಯಿಂಟ್‌ಮೆಂಟ್‌ ಪಡೆಯಬೇಕು.

ಒಂದು ಮೊಬೈಲ್‌ ಸಂಖ್ಯೆಯಿಂದ ಇನ್ನೂ ಮೂವರ ಹೆಸರನ್ನು ನೋಂದಾಯಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next