Advertisement

ಕೊಳವೆ ಬಾವಿಗಳಿಗೆ ನೋಂದಣಿ ಶುಲ್ಕ: ಕಾಂಗ್ರೆಸ್‌ ಆಕ್ಷೇಪ

10:29 PM Jul 09, 2022 | Team Udayavani |

ಬೆಂಗಳೂರು: ಗೃಹ ಬಳಕೆಯ ಹಾಗೂ ಹೊಸದಾಗಿ ಕೊರೆಸುವ ಕೊಳವೆ ಬಾವಿಗಳಿಗೆ ಕೇಂದ್ರ ಅಂತರ್ಜಲ ಪ್ರಾಧಿ ಕಾರವು 10 ಸಾವಿರ ರೂ. ನೋಂದಣಿ ಶುಲ್ಕ ಪಾವತಿಸಿ ನಿರಾಕ್ಷೇಪಣ ಪತ್ರ ಪಡೆಯುವಂತೆ ಸೂಚಿಸಿರುವುದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವಿಧಾನ ಪರಿಷತ್ತಿನ ಅಧ್ಯಕ್ಷ ಯು.ಬಿ. ವೆಂಕಟೇಶ್‌, ಗೃಹಬಳಕೆ ನೀರಿನ ವಿಷಯದಲ್ಲಿ ಕೇಂದ್ರ ಸರಕಾರ ಸಾರ್ವಜ ನಿಕರಿಗೆ ಬರೆ ಹಾಕಲು ಹೊರಟಿದೆ. ಆ ವಿಚಾರದಲ್ಲಿ ಮುಖ್ಯಮಂತ್ರಿ ಮಧ್ಯಪ್ರ ವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿರಾಕ್ಷೇಪಣ ಪತ್ರ ಪಡೆಯದಿದ್ದಲ್ಲಿ 1 ಲಕ್ಷ ರೂ.ದಂಡ ವಿಧಿಸುವ ಎಚ್ಚರಿಕೆ ಯನ್ನೂ ಪ್ರಾಧಿಕಾರ ನೀಡಿದೆ. ಇದನ್ನು ಕೂಡಲೇ ಹಿಂಪಡೆಯಬೇಕು. ಜತೆಗೆ ರಾಜ್ಯ ಸರಕಾರವೂ ಈ ಆದೇಶವನ್ನು ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next