Advertisement

ವಲಸೆ ಕಾರ್ಮಿಕರಿಗಾಗಿ ನೋಂದಣಿ ಕೇಂದ್ರ

05:27 AM Jun 10, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿ ಅವರನ್ನು ಜಿಲ್ಲೆಯಿಂದ ಕಳುಹಿಸಿಕೊಡುವ ಸಲುವಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಲಸೆ ಕಾರ್ಮಿಕರ ಕೇಂದ್ರವನ್ನು  ತೆರೆಯಲಾಗಿದ್ದು, ವಲಸೆ ಕಾರ್ಮಿಕರು ಇದನ್ನು ಬಳಸಿಕೊಳ್ಳಬೇಕು ಎಂದು ಡೀಸಿ ಡಾ.ಎಂ. ಆರ್‌.ರವಿ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನೋಂದಣಿ ಕೇಂದ್ರದಲ್ಲಿ ಜಿಲ್ಲೆಯಿಂದ ಹೊರರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರ ವಿವರವನ್ನು ಸೇವಾಸಿಂಧು ತಂತ್ರಾಂಶದಲ್ಲಿ ನಾವೇ ನೋಂದಣಿ ಮಾಡಿಕೊಡಲಿದ್ದೇವೆ. ನೋಂ ದಾಯಿಸಿದ ವಲಸೆ ಕಾರ್ಮಿಕರಿಗೆ ಮೈಸೂರು, ಬೆಂಗಳೂ ರಿನಿಂದ ಅವರ  ರಾಜ್ಯಗಳಿಗೆ ರೈಲಿನಲ್ಲಿ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ತೆರೆಯಲಾಗಿರುವ ವಲಸೆ ಕಾರ್ಮಿಕರ ನೋಂದಣಿ ಕೇಂದ್ರಕ್ಕೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್‌ ಅಧಿಕಾರಿಗಳನ್ನಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ: 9742164846, ಚಾಮರಾಜನಗರ ತಹಶೀಲ್ದಾರ್‌: 9902434583, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಉಪನ್ಯಾಸಕ ಅರುಣ್‌: 7899540377, ಚಿಕ್ಕ  ಬಸಪ್ಪ: 948183093, ಇ-ಡಿಸ್ಟ್ರಿಕ್ಟ್ ಯೋಜನೆ ಯೋಜನಾ ವ್ಯವಸ್ಥಾಪಕ ನಂಜುಂಡಸ್ವಾಮಿ: 9538100543 ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್‌ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ  9449843192) ಅವರು ಆರೋಗ್ಯ  ತಪಾಸಣೆ ಕಾರ್ಯ ನಿರ್ವಹಿಸುವರು. ಊಟೋಪಚಾರದ ವ್ಯವಸ್ಥೆಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ ಹೊನ್ನೇಗೌಡ (9448602635), ಸ್ವತ್ಛತೆ ಕಾರ್ಯದ ಮೇಲುಸ್ತುವಾರಿಗಾಗಿ ನಗರಸಭೆ ಪೌರಾಯುಕ್ತ ರಾಜಣ್ಣ (9480362679) ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಹೊರ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು ನೋಂದಣಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಈ ವ್ಯವಸ್ಥೆಯ ಪ್ರಯೋಜನವನ್ನು ವಲಸೆ ಕಾರ್ಮಿಕರು ಪಡೆದುಕೊಳ್ಳಬೇಕು.
-ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next