Advertisement

ಮೆಡ್‌ ಡಾಕ್ಟರ್‌ ಬಳಕೆಗೆ ಆರ್‌ಎಂಪಿ ವೈದ್ಯರಿಗೆ ಅವಕಾಶ

01:10 AM May 28, 2022 | Team Udayavani |

ನವದೆಹಲಿ: ಜನಬಳಕೆಯಲ್ಲಿ “ಆರ್‌ಎಂಪಿ ವೈದ್ಯ’ರೆಂದು ಕರೆಯಲ್ಪಡುವ “ರಿಜಿಸ್ಟರ್ಡ್‌ ಮೆಡಿಕಲ್‌ ಪ್ರಾಕ್ಟೀಷನರ್ಸ್‌’ಗಳಿಗೆ ಸಂಬಂಧಿಸಿದ ದೂರುಗಳನ್ನು ಇತ್ಯರ್ಥಗೊಳಿಸಲು, ಅವರ ಸೇವೆಗಳಲ್ಲಿ ಸುಧಾರಣೆ ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) “ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿ’ (ಇಎಂಆರ್‌ಬಿ) ಮಹತ್ವದ ಹೆಜ್ಜೆಯಿಟ್ಟಿದೆ.

Advertisement

ಇದಕ್ಕಾಗಿ, “2022ರ ನ್ಯಾಷನಲ್‌ ಮೆಡಿಕಲ್‌ ಕಮಿಷನ್‌ ರಿಜಿಸ್ಟರ್ಡ್‌ ಮೆಡಿಕಲ್‌ ಪ್ರಾಕ್ಟೀಷನರ್‌ ರೆಗ್ಯುಲೇಷನ್ಸ್‌’ ಎಂಬ ಕರಡು ಸಿದ್ಧಪಡಿಸಿದ್ದು ಅದನ್ನು ಎನ್‌ಎಂಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ (www.nmc.org)ಪ್ರಕಟಿಸಲಾಗಿದೆ.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳು, ರೋಗಿಗಳು, ಸಾರ್ವಜನಿಕ ವಲಯದಿಂದ ಸಲಹೆಗಳನ್ನು ಜೂ.22ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನಿಯಮಾವಳಿಗಳು, 2002ರ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾದ ನಿಯಮಾವಳಿಗಳ ಬದಲಾಗಿ ಜಾರಿಗೆ ಬರಲಿವೆ.

ಕರಡು ಪ್ರತಿಯ ಪ್ರಮುಖ ಅಂಶಗಳು:
– 2019ರ ಎನ್‌ಎಂಸಿ ನಿಯಮಗಳ ಪ್ರಕಾರ, ರಾಜ್ಯಗಳ ವೈದ್ಯಕೀಯ ರಿಜಿಸ್ಟರ್‌ ಅಥವಾ ಭಾರತೀಯ ವೈದ್ಯಕೀಯ ರಿಜಿಸ್ಟರ್‌ ಅಥವಾ ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ಎಲ್ಲಾ ಆರ್‌ಎಂಪಿಗಳು ತಮ್ಮ ಹೆಸರಿನ ಮೊದಲು ಮೆಡ್‌ ಡಾಕ್ಟರ್‌ (Mಉಈ ಈr.) ಎಂಬ ಪದಗಳನ್ನು ಪೂರ್ವ ಪ್ರತ್ಯಯಗಳನ್ನಾಗಿ ಕಡ್ಡಾಯವಾಗಿ ಸೇರಿಸಬೇಕು.
– ಆರ್‌ಎಂಪಿ ವೈದ್ಯರು ಕೇವಲ ಆಧುನಿಕ ವೈದ್ಯಕೀಯ ಪದ್ಧತಿ ಅಥವಾ ಅಲೋಪತಿ ವೈದ್ಯರಾಗಿ ಮಾತ್ರ ಸೇವೆ ಸಲ್ಲಿಸತಕ್ಕದ್ದು.
– ವಿದೇಶಿ ಶಿಕ್ಷಣ ಸಂಸ್ಥೆಗಳಿಂದ ಆರ್‌ಎಂಪಿ ವೈದ್ಯರಾಗುವ ಅರ್ಹತೆ ಪಡೆದವರು ಫಾರಿನ್‌ ಮೆಡಿಕಲ್‌ ಗ್ರ್ಯಾಜುಯೇಟ್‌ ಎಕ್ಸಾಂ (ಎಫ್ಎಂಜಿಇ) ಅಥವಾ ನ್ಯಾಷನಲ್‌ ಎಕ್ಸಿಟ್‌ ಟೆಸ್ಟ್‌ (ನೆಕ್ಸ್ಟ್) ಪರೀಕ್ಷೆ ಮೂಲಕ ಭಾರತದಲ್ಲಿ ವೃತ್ತಿ ಆರಂಭಿಸಲು ಅರ್ಹತೆ ಪಡೆದರೆ ಅಂಥವರೂ ತಮ್ಮ ಹೆಸರಿನ ಹಿಂದೆ ಮೆಡ್‌ ಡಾಕ್ಟರ್‌ (MED Dr.) ಎಂಬ ಪದಗಳನ್ನು ಉಲ್ಲೇಖಿಸಬೇಕು.
– ಎನ್‌ಎಂಸಿಯಿಂದ ಮಾನ್ಯತೆ ಪಡೆದ ತರಬೇತಿ ಅಥವಾ ಅರ್ಹತೆ ಪಡೆಯದಿರುವ ಯಾವುದೇ ಆರ್‌ಎಂಪಿಗಳು, ಯಾವುದೇ ವೈದ್ಯಕೀಯ ವಿಭಾಗದಲ್ಲಿ ತಮ್ಮನ್ನು ತಾವು ತಜ್ಞರು ಎಂದು ಕರೆದುಕೊಳ್ಳುವಂತಿಲ್ಲ.
– ಶುಲ್ಕ ನೀಡಲಿಲ್ಲವೆಂದು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸುವುದು ಅಥವಾ ಅಪೂರ್ಣ ಚಿಕಿತ್ಸೆ ನೀಡಿದರೆ ಅಂಥ ಆರ್‌ಎಂಪಿಗಳ ಪರವಾನಗಿ ರದ್ದುಗೊಳಿಸಲಾಗುತ್ತದೆ.
– ವೃತ್ತಿಪರತೆಯ ನಿರಂತರ ಅಭಿವೃದ್ಧಿ (ಸಿಪಿಡಿ) ಅಡಿಯಲ್ಲಿ ಆರ್‌ಎಂಪಿಗಳು ತಮ್ಮ ವ್ಯಾಸಂಗ ಮುಂದುವರಿಸಿದರೆ ಅಂಥ ಒಂದೊಂದು ಕೋರ್ಸ್‌ಗೂ ನಿರ್ದಿಷ್ಟ ಅಂಕ ನೀಡಿ, ಆ ಅಂಕಗಳನ್ನು ಆರ್‌ಎಂಪಿಗಳ ಪರವಾನಗಿ ನವೀಕರಣದ ವೇಳೆ ಪರಿಗಣಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next