Advertisement

ಹಿಮಾಚಲದಲ್ಲೂ ಜೋಶಿಮಠದ ಪರಿಸ್ಥಿತಿ; ಸಿಎಂ ಸುಖ್ವಿಂದರ್ ಸಿಂಗ್ ಪ್ರತಿಪಾದನೆ

09:26 PM Jan 16, 2023 | Team Udayavani |

ಶಿಮ್ಲಾ/ನವದೆಹಲಿ:ಜೋಶಿಮಠದಂತೆ ಹಿಮಾಚಲ ಪ್ರದೇಶದ ಕೆಲವೆಡೆ ಕಟ್ಟಡಗಳಲ್ಲಿ ಬಿರುಕು ಉಂಟಾಗಿ ವಾಲುತ್ತಿವೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

Advertisement

ಭಾರತೀಯ ಹವಾಮಾನ ಇಲಾಖೆಯ 148ನೇ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಕೆಲವೊಂದು ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೂ ಈಗ ಅಸಾಧ್ಯವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರು ತೊಂದರೆಗೆ ಒಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಹಿಮಾಚಲ ಸಿಎಂ ಮನವಿ ಮಾಡಿದರು.

ಪದೇ ಪದೆ ಮೇಘ ಸ್ಫೋಟಗಳಿಂದ ತೊಂದರೆಗೆ ಈಡಾಗುವ ಕಿನೌರ್‌ ಮತ್ತು ಸ್ಪಿಟಿಯಲ್ಲಿ ಶೇ.30 ಪ್ರದೇಶಗಳಿಗೆ ತೊಂದರೆಯಾಗಿದೆ. ಆ ಪ್ರದೇಶದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕಾಗಿದೆ. 2-3 ವರ್ಷಗಳ ಹಿಂದೆ ಕಿನೌ°ರ್‌ನಲ್ಲಿ ಮೇಘ ಸ್ಫೋಟ ಉಂಟಾಗಿದ್ದರಿಂದ ಜೀವ ಮತ್ತು ಆಸ್ತಿಗೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಗಮನ ಅಗತ್ಯ ಎಂದರು.

ಪ್ರಚಾರಕ್ಕಾಗಿ ಬೇಡ:
ಜೋಶಿಮಠ ಭೂಕುಸಿತ ವಿಚಾರಕ್ಕೆ ಸಂಬಂಧಿಸಿ ಉತ್ತರಾಖಂಡ ಹೈಕೋರ್ಟ್‌ ವಿಚಾರಣೆ ಮುಂದುವರಿಸಲಿ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಅರ್ಜಿದಾರ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪರ ವಕೀಲರಿಗೆ ಸೂಚನೆ ನೀಡಿ, “ಹೈಕೋರ್ಟ್‌ನಲ್ಲಿ ಹೊಸತಾಗಿ ಪಿಐಎಲ್‌ ಸಲ್ಲಿಸಿ. ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗಳು ನಡೆಯುವುದು ಅಗತ್ಯವಿಲ್ಲ’ ಎಂದು ಹೇಳಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next