ಕಲಬುರಗಿ: ರಾಜ್ಯದ ನಾಲ್ಕು ಕಡೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯ ದ ಪ್ರಾದೇಶಿಕ ಕಚೇರಿಗಳನ್ನು ಕಾರ್ಯಾರಂಭಗೊಳಿಸಲಾಗುತ್ತಿದೆ ಎಂದು ವಿವಿಯ ಕುಲಪಯಿ ಡಾ. ಎಸ್. ಸಚ್ಚಿದಾನಂದ ತಿಳಿಸಿದರು.
ಶನಿವಾರ ಇಲ್ಲಿನ ಎಚ್ಕೆಇ ಸಂಸ್ಥೆಯ ತಾರಾ ದೇವಿ ರಾಂಪೂರೆ ಫಾರ್ಮಸಿ ಕಾಲೇಜ್ನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿ ಗಳಿಗೆ ಪದವಿ ಪ್ರದಾನಗೈದು ತದನಂತರ ಉದಯವಾಣಿ ಯೊಂದಿಗೆ ಮಾತನಾಡಿದರು.
ವೈದ್ಯಕೀಯ ಹಾಗೂ ವೈದ್ಯಕೀಯ ಅರೆ ಸೇವಾ ಕೋರ್ಸುಗಳ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸೇವೆಗಳು ಅವರಿರುವ ಸಮೀಪದಲ್ಲೇ ಸಿಗುವಂತಾಗಲು ಪ್ರಾದೇಶಿಕ ಕೇಂದ್ರಗಳು ಪೂರಕವಾಗಲಿವೆ ಎಂದು ವಿವರಣೆ ನೀಡಿದರು.ರಾಜೀವ್ ಗಾಂಧಿ ವಿವಿಯ ಪ್ರಥಮ ಪ್ರಾದೇಶಿಕ ಕೇಂದ್ರವಾಗಿ ಕಲಬುರಗಿಯಲ್ಲಿ ಕಾರ್ಯರಂಭಗೊಳಿಸುವ ಕಾರ್ಯ ಸನ್ನಿ ಹಿತವಾಗಿದ್ದು, ಎರಡ್ಮೂರು ತಿಂಗಳೊಳಗೆ ಪ್ರಾರಂಭವಾಗಲಿದೆ. ಕಲಬುರಗಿ ವಿಮಾನ ನಿಲ್ದಾ ಸಮೀಪದ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣ ವಾಗಿದೆ. ಉಳಿದಂತೆ ಬೆಳಗಾವಿ, ದಾವಣಗೆರೆಯಲ್ಲಿ ಪ್ರಾದೇಶಿಕ ಕಚೇರಿ ಕಟ್ಟಡ ನಿರ್ಮಾಣ ಸಂಬಂಧ ಟೆಂಡರ್ ಕರೆಯಲಾಗಿದೆ. ಮಂಗಳೂರು ದಲ್ಲಿ ಇನ್ನೂ ಜಾಗ ಸಿಕ್ಕಿಲ್ಲ. ಜಾಗ ಸಿಕ್ಕ ನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಆರೋಗ್ಯ ವಿವಿಯ ಪ್ತಾದೇಶಿಕ ಕಚೇರಿ ಕಾರ್ಯರಂಭವಾದಲ್ಲಿ ಡಿಜಿಟಲ್ ಮೌಲ್ಯ ಮಾಪನ, ಪ್ರಾಧ್ಯಾಪಕ ರ ತರಬೇತಿ ಕಾರ್ಯ ಸೇರಿದಂತೆ ಇತರ ಕಾರ್ಯಗಳು ನಡೆಯಲಿವೆ. ಒಟ್ಟಾರೆ ವಿದ್ಯಾರ್ಥಿ ಗಳು ಹಾಗೂ ಪ್ರಾಧ್ಯಾಪಕರು ಬೆಂಗಳೂರಿಗೆ ವಿವಿಗೆ ಅಲೆದಾಡುವುದು ತಕ್ಕ ಮಟ್ಟಿಗೆ ತಪ್ಪಲಿದೆ ಎಂದು ಕುಲಪತಿ ಡಾ. ಸಚ್ಚಿದಾನಂದ ವಿವರಿಸಿದರು.
ಅರೆ ವೈದ್ಯಕೀಯ ಕೋರ್ಸುಗಳ ಪರೀಕ್ಷೆ ಅದರಲ್ಲೂ ವೈದ್ಯಕೀಯ ಪರೀಕ್ಷೆಗಳಲ್ಲಿ ಮತ್ತ ಷ್ಟು ಕಠಿಣತೆ ತರಲು ಮುಂದಾಗಲಾಗಿದೆ. ಪರೀಕ್ಷೆಯ ಯನ್ನು ನೇರವಾಗಿ ಸೆಟಲೈಟ್ ಮೂಲಕ ನೋಡುವಂತಾಗುವ ಪದ್ದತಿ ಯನ್ನು ಜಾರಿಗೆ ತರಲಾಗುತ್ತಿದೆ.ಈ ಮೊದಲು ವೈದ್ಯಕೀಯ ಪರೀಕ್ಷೆಗಳನ್ನು ಸಿಸಿ ಕ್ಯಾಮರಾದಲ್ಲಿ ಸೆರೆ ಹಿಡಿದು ನೋಡಲಾಗುತ್ತಿತ್ತು. ಆದರೆ ಎಲ್ಲವನ್ನು ನೋಡಲಿಕ್ಕಾಗುತ್ತಿರಲಿಲ್ಲ.ಈಗ ಪರೀಕ್ಷೆಯನ್ನು ಲೈವ ಆಗಿ ಎಲ್ಲರೂ ನೋಡಬಹುದಾಗಿದೆ ಎಂದು ಕುಲಪತಿ ಗಳು ಹೇಳಿದರು