Advertisement
ಅವರು ರವಿವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಮಧ್ವಾಚಾರ್ಯ ನಗರ, ಕೃಷ್ಣ ಪಡ್ವೆಟ್ನಾಯ ಸಭಾಂಗಣ, ಮಂಜಯ್ಯ ಹೆಗ್ಗಡೆ ವೇದಿಕೆಯಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾ ರೋಪದಲ್ಲಿ ಮಾತನಾಡಿದರು.
ನಾಡು ನುಡಿಯ ಕುರಿತು ಸಮ ಕಾಲೀನರಿಗೆ ಅರಿವಿರಬೇಕು ಎಂಬ ಉದ್ದೇಶದಿಂದ ಸಾಹಿತ್ಯ ಸಮ್ಮೇಳನದ
ಅಗತ್ಯ ಇದೆ. ನಾಡು – ನುಡಿ ನಾವು ಗೌರವಿಸಬೇಕಾದ ಮಾತೃ ಸ್ವರೂಪಿಗಳು. ಅವು ನಮಗೆ ಗೌರವ, ವ್ಯಕ್ತಿತ್ವವನ್ನು ನೀಡುತ್ತವೆ. ಅಂತಹ ನಾಡು ನುಡಿಯ ಮೇಲೆ ಸಾಹಿತಿಗಳ ಸಾಹಿತ್ಯದ ಪ್ರಭಾವ ಅಗೋಚರವಾಗಿ ಇರುತ್ತದೆ ಎಂದರು. ಜೀವ ಕಾರುಣ್ಯದ ಸೃಷ್ಟಿ
ಸಮಾರೋಪ ಭಾಷಣ ಮಾಡಿದ ಶಿಕ್ಷಣ ತಜ್ಞ ಡಾ| ರಾಧಾಕೃಷ್ಣ, ಸಾಹಿತಿ ಗಳು ಸಮಾಜವನ್ನು ತಿದ್ದಬೇಕೇ ಅಥವಾ ಸಮಾಜದ ಧ್ವನಿಯಾಗಬೇಕೆ ಎಂಬ ಜಿಜ್ಞಾಸೆ ಹಿಂದಿನಿಂದಲೂ ಇದೆ. ಆದರೆ ಸುಡುವ ಸಂಸ್ಕೃತಿ ಸಾಹಿತ್ಯದ್ದಲ್ಲ. ನೆಡುವ ಹಾಗೂ ಕೊಡುವ ಸಂಸ್ಕೃತಿ ಸಾಹಿತ್ಯದ್ದು ಎಂದರು.
Related Articles
ಸಮ್ಮೇಳನಾಧ್ಯಕ್ಷ ಡಾ| ಕೆ. ಚಿನ್ನಪ್ಪ ಗೌಡ ಮಾತನಾಡಿ, ಸಾಹಿತ್ಯದಲ್ಲಿ ಧಾರ್ಮಿಕವಾಗಿ ನೋಡಿದರೆ ಲೌಲಿಕ, ಅಲೌಕಿಕ ಹಾಗೂ ಇಹಪರಗಳೆಂಬ ಮೂರು ದೃಷ್ಟಿಕೋನಗಳು ಕಾಣಿಸುತ್ತವೆ. ಕನ್ನಡಿಗನ ಮನಸ್ಸು ಯಾವಾಗ ನೆಲ ಬಿಡುತ್ತದೋ ಆಗ ನೆಲದಲ್ಲಿ ನೆಲೆ ನಿಲ್ಲಿಸುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದರು.
Advertisement
ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಿ. ಯಶೋವರ್ಮ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾರ್ಯಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಪ್ರಧಾನ ಕಾರ್ಯ ದರ್ಶಿ ಡಾ| ಎಂ.ಎಂ. ದಯಾಕರ್, ಪದಾಧಿಕಾರಿಗಳಾದ ಹರೀಶ್ ಪೂಂಜಾ, ಸಂಪತ್ ಬಿ. ಸುವರ್ಣ, ಕೇಶವ ಪಿ. ಬೆಳಾಲು, ತಮ್ಮಯ್ಯ, ಐತಪ್ಪ, ಅಚ್ಚು ಮುಂಡಾಜೆ, ಪೂರ್ಣಿಮಾ ರಾವ್, ಮೋಹನ್ ರಾವ್, ಶಾಂತಿ ಚಿನ್ನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಂಬಳಕ್ಕೆ ಬೆಂಬಲಸಾಹಿತ್ಯ ಸಮ್ಮೇಳನದಲ್ಲಿ ಕಂಬಳವನ್ನು ಬೆಂಬಲಿಸಿ ನಿರ್ಣಯ ಕೈಗೊಳ್ಳಲಾ ಯಿತು. ತುಳುನಾಡಿನ ಕಂಬಳಕ್ಕೆ ನಮ್ಮ ಬೆಂಬಲವನ್ನು ಸೂಚಿಸುತ್ತಾ ಎಲ್ಲ ಹಿಂಸೆ ರಹಿತ, ಜೂಜುರಹಿತ, ವ್ಯಸನ ರಹಿತ ಜನಪದೀಯ ಆಚರಣೆ ಗಳಿಗೆ ಶಾಸನಾತ್ಮಕವಾಗಿ ಅವಕಾಶ ಕಲ್ಪಿಸಿಕೊಡಬೇಕೆಂದು ಸರಕಾರವನ್ನು ಆಗ್ರಹಿಸಲಾಯಿತು. ಕುದ್ಮಲ್ ರಂಗರಾವ್ ಸಹಿತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಪರಿಚಯಿಸುವಂತಹ ವ್ಯವಸ್ಥೆ ಆಗಬೇಕು. ಎಲ್ಲ ಹಂತದ ಶಿಕ್ಷಣದಲ್ಲಿ ಕನ್ನಡಕ್ಕೆ ಸಮಾನ ಸ್ಥಾನ ಒದಗಿಸಬೇಕು. ಪದವಿ ರ್‍ಯಾಂಕ್ ನೀಡುವ ಸಂದರ್ಭ ಕನ್ನಡ ಭಾಷಾ ವಿಷಯದ ಅಂಕಗ ಳನ್ನು ಪರಿಗಣಿಸಬೇಕೆಂದು ಆಗ್ರಹಿಸಲಾಯಿತು. ಜತೆಗೆ ಈ ಹಿಂದಿನ 20 ಸಮ್ಮೇಳನಗಳ ನಿರ್ಣಯನ್ನು ಅನುಷ್ಠಾನಗೆೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಡಾ| ದಯಾಕರ್ ಸ್ವಾಗತಿಸಿ, ಡಾ| ಎಂ. ಪಿ. ಶ್ರೀನಾಥ್ ವಂದಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು.