ಬೀದರ: ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಗರದ ಲಾಡಗೇರಿ ಬಡಾವಣೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಬಡಾವಣೆಯ ನಿವಾಸಿಗಳಾದ ಶರತ್ (26) ಹಾಗೂ ಸಂಗೀತಾ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.
ಮೃತ ಶರತ್ ಹಾಗೂ ಸಂಗೀತಾ ಅವರು ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಸಂಗೀತಾಳ ಕುಟುಂಬಸ್ಥರು ಬೇರೆಯವರೊಂದಿಗೆ ಆಕೆಯ ನಿಶ್ಚಿತಾರ್ಥ ಮಾಡಿದ್ದರು. ವಿಷಯ ತಿಳಿದ ಶರತ್ ಸೋಮವಾರ ತಡರಾತ್ರಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ. ಶರತ್ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿದ ಸಂಗೀತಾ ಸಹ ಆಘಾತಗೊಂಡು ಮನೆಯ ಸಮೀಪದ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ: ಬಂಟ್ವಾಳ: ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿಯ ರಕ್ಷಣೆ
ಘಟನೆ ನಗರದ ಗಾಂಧಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.