Advertisement

ಮನೆ ಹಂಚಿಕೆಗೆ ನಿರಾಶ್ರಿತರ ಮನವಿ

01:08 PM May 14, 2019 | Team Udayavani |

ಬೆಳಗಾವಿ: ಇಲ್ಲಿಯ ಶ್ರೀನಗರ ಬಳಿ ರಾಜು ಆವಾಸ್‌ ಯೋಜನೆಯಡಿ ನಿರ್ಮಿಸಿದ 272 ಬಹುಮಹಡಿ ಕಟ್ಟಡಗಳನ್ನು ವಂಟಮೂರಿ ಜೋಪಡಪಟ್ಟಿ ನಿರಾಶ್ರಿತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ವಂಟಮೂರಿ ಕಾಲೋನಿ ಜೋಪಡಪಟ್ಟಿಯಲ್ಲಿ ಸುಮಾರು 20-25 ವರ್ಷಗಳಿಂದ ನಿರಾಶ್ರಿತರಾಗಿ ವಾಸವಾಗಿದ್ದು, ಈವರೆಗೆ ಯಾವುದೇ ಆಶ್ರಯವಿಲ್ಲದೇ ಜೀವನ ಸಾಗಿಸುತ್ತಿದ್ದೇವೆ. ರಾಜು ಆವಾಸ್‌ ಯೋಜನೆಯಡಿ ಜಿ ಪ್ಲಸ್‌ 3 ಯೋಜನೆಯಡಿ ಅರ್ಜಿ ತುಂಬಿ ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ಕೊಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಅವರು ಶ್ರೀನಗರ ಗಾರ್ಡನ್‌ ಬಳಿಯ ಆಶ್ರಯ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಆಶ್ರಯ ಮನೆಗಳಿಗೆ ಹಣ ತುಂಬಲು ಸಿದ್ಧರಿದ್ದರೂ ನಮಗೆ ಚಲನ್‌ ನೀಡದೇ, ನಮ್ಮ ಅಹವಾಲು ಸ್ವೀಕರಿಸದೇ, ಅರ್ಹ ಫಲಾನುಭವಿಗಳನ್ನು ಬದಿಗಿಟ್ಟು ತರಾತುರಿಯಲ್ಲಿ ಬೇರೆಯವರಿಂದ ಅರ್ಜಿ ತುಂಬಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆಯವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಚುನಾವಣಾ ನೀತಿ ಸಂಹಿತಿ ಎಂದು ಹೇಳುತ್ತಿದ್ದಾರೆ. ಈಗ ನೋಡಿದರೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ನಮ್ಮ ಕಾಲೋನಿಗೆ ಜಿಲ್ಲಾಧಿಕಾರಿಗಳು ಇತರೆ ಅಧಿಕಾರಿಗಳೊಂದಿಗೆ ಬಂದು ಭೇಟಿ ನೀಡಬೇಕು. ಆಶ್ರಯ ಮನೆಗಳಿಗಾಗಿ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಕಡೆಗೆ ತಿರುಗಾಡಿ ಸಾಕಾಗಿ ಹೋಗಿದೆ. ನಮ್ಮ ಜೀವನ ಸ್ಥಿತಿಗತಿ ನೋಡಿ ಮುಂದಿನ ಕ್ರಮ ಕೈಗೊಳ್ಳಬೇಕು. ಝೋಪಡಪಟ್ಟಿ ನಿವಾಸಿಗಳಿಗೆ ಆಶ್ರಯ ಒದಗಿಸಿ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ನಿವಾಸಿಗಳಾದ ಮಾರುತಿ ಗೊಡಚಿ, ಬಸಪ್ಪ ಕರಡಿಗುಡ್ಡ, ಶಿವಪ್ಪ ಬೆಡಸೂರ, ರಮೇಶ ಮಾದರ, ಕರಿಯಪ್ಪ ಮಾದರ, ರಮೇಶ ಪ್ಯಾಟಿ, ಬೀರಪ್ಪ ಚೌಡಕಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next