Advertisement
ಜಪ್ಪು ಕುಡುಪಾಡಿ ನಿವಾಸಿ 4 ವರ್ಷಗಳಿಂದ ಉರ್ವ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕಿಯಾಗಿರುವ ಸುಮಿತ್ರಾ ರಜಾ ದಿನಗಳಲ್ಲಿ ತಿಂಡಿಯ ಬದಲು ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ. ಪತಿ ಪ್ರೇಮ್ ಮೆಸ್ಕಾಂನಲ್ಲಿ ಲೈನ್‌ಮನ್ ಆಗಿದ್ದು, ದಂಪತಿಗೆ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ.
ಕೆಲವು ದಿನಗಳ ಹಿಂದೆ ಅನುಭವಕ್ಕೆ ಬಂದ ಘಟನೆ ಅವರನ್ನು ಈ ಸೇವೆಗೆ ಪ್ರೇರೇಪಿಸಿದೆ. ಅಂದು ಪುತ್ರಿ ಜತೆ ಬೆಳಗ್ಗೆ ಕಂಕನಾಡಿಯಲ್ಲಿ ಔಷಧ ಖರೀದಿಸಿ ಸ್ಕೂಟರ್‌ನಲ್ಲಿ ಮನೆ ಕಡೆಗೆ ಹೊರಟಿದ್ದರು. ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯ ಬಸ್ ನಿಲ್ದಾಣ ಬಳಿ ಭಿಕ್ಷುಕರ ರೀತಿ ಕಂಡು ಬಂದ ಇಬ್ಬರು ಕೂಗಿ ಕರೆದರು. ಜತೆಗಿದ್ದ ಪುತ್ರಿ ಈ ಬಗ್ಗೆ ತಾಯಿಯ ಗಮನ ಸೆಳೆದಳು. ಸ್ಕೂಟರ್ ನಿಲ್ಲಿಸಿ 10 ರೂ. ಕೊಡಲು ಹೋದಾಗ ಅವರು ಹಣದ ಬದಲು ಏನಾದರೂ ತಿಂಡಿ ಕೊಡಿ ಎಂದರಂತೆ. ತತ್‌ಕ್ಷಣ ಮನೆಗೆ ಹೋಗಿ ತಮಗಾಗಿ ತಯಾರಿಸಿ ಇಟ್ಟಿದ್ದ ತಿಂಡಿಯನ್ನು ತಂದು ಅವರಿಗೆ ನೀಡಿದರಂತೆ. ಇದು ಸುಮಿತ್ರಾ ಅವರ ದಾಸೋಹ ಸೇವೆಯ ಮೊದಲ ದಿನ. ಅಂದಿನಿಂದ ನಿತ್ಯವೂ ಬೆಳಗ್ಗೆ ಮನೆಯಲ್ಲಿ ವಿಭಿನ್ನ ತಿಂಡಿ ತಯಾರಿಸಿ ಪೊಟ್ಟಣದಲ್ಲಿ ವಿವಿಧ ಭಾಗಗಳಿಗೆ ತೆರಳಿ 50ರಿಂದ 60 ಮಂದಿಗೆ ಹಂಚುತ್ತಾರೆ. ಬೆಳಗ್ಗೆ 7.30ಕ್ಕೆ ಹೊರಟು ಸೇವೆ ಮುಗಿಸಿ ಕರ್ತವ್ಯಕ್ಕೆ ತೆರಳುತ್ತಾರೆ.
Related Articles
Advertisement
ಬಂಟ್ವಾಳದ ಇರಾ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ಬಾಲ್ಯದ ದಿನಗಳಲ್ಲಿ ಊಟಕ್ಕಿಲ್ಲದೆ ಕಷ್ಟಪಟ್ಟಿದ್ದೆ. ಆಗ ಪಕ್ಕದ ಮನೆಯವರು ನೆರವಾಗಿದ್ದರು.
ಈಗ ಮದುವೆಯಾಗಿ ಮಕ್ಕಳಿದ್ದು,ಕಷ್ಟದಲ್ಲೇ ಬದುಕುತ್ತಿದ್ದೇವೆ. ಪತಿಯ ವೇತನ ಮನೆ ಸಾಲದ ಕಂತು ಪಾವತಿಸಲು ಬೇಕಾಗುತ್ತದೆ. ಗೃಹ ರಕ್ಷಕಿಯಾಗಿರುವ ನನಗೆ ಸಿಗುವ ಗೌರವ ಧನ ದಿಂದಲೇ ಬದುಕು ನಡೆಯುತ್ತಿದೆ. ಆದರೂ ಹಂಚಿ ತಿಂದಾಗ ಸಿಗುವ ಸುಖವೇ ಬೇರೆ.– ಸುಮಿತ್ರಾ, ಗೃಹರಕ್ಷಕಿ