Advertisement

ಶ್ರೇಯಸ್‌-ನಂದಕಿಶೋರ್‌ ಹೊಸಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ

09:49 AM Apr 12, 2021 | Team Udayavani |

ಕೆಲವು ನಾಯಕ ನಟಿಯರು ಚಿತ್ರರಂಗದಲ್ಲಿ ಒಂದೆರಡು ಸಿನಿಮಾಗಳು ಬಿಡುಗಡೆಯಾದ ಬಳಿಕ ಬಿಝಿಯಾದರೆ, ಇನ್ನು ಕೆಲವು ನಾಯಕ ನಟಿಯರು ತಮ್ಮ ಮೊದಲ ಸಿನಿಮಾ ರಿಲೀಸ್‌ ಆಗೋದಕ್ಕೂ ಮುಂಚೆಯೇ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗುತ್ತಾರೆ. ಆ ಸಾಲಿಗೆ ಈಗ ಸೇರುತ್ತಿರುವ ಹೆಸರು ರೀಷ್ಮಾ ನಾಣಯ್ಯ.

Advertisement

ಹೌದು, ಸದ್ಯ ರೀಷ್ಮಾ ನಾಣಯ್ಯ ಜೋಗಿ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಸಿನಿಮಾದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ ವುಡ್‌ಗೆ ಪರಿಚಯವಾಗುತ್ತಿದ್ದಾರೆ. ರೀಷ್ಮಾ ಅಭಿನಯದ ಚೊಚ್ಚಲ ಸಿನಿಮಾ “ಏಕ್‌ ಲವ್‌ ಯಾ’ ಬಿಡುಗಡೆಯಾಗುವ ಮೊದಲೆ, “ಆ ದಿನಗಳು’ ಖ್ಯಾತಿಯ ಚೇತನ್‌ ನಾಯಕನಾಗಿ ಅಭಿನಯಿಸುತ್ತಿರುವ ದ್ವಿಭಾಷಾ ಸಿನಿಮಾ “ಮಾರ್ಗ’ದಲ್ಲೂ ರೀಷ್ಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರತಂಡ ಶೂಟಿಂಗ್‌ ಆರಂಭಿಸಲು ತಯಾರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ರೀಷ್ಮಾ ಮತ್ತೂಂದು ಹೊಸಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಶೂಟಿಂಗ್‌ಗೆ ‘ಕರಿಯ ಐ ಲವ್‌ ಯೂ’ ರೆಡಿ: ಗಾಯಕಿ ಮಂಗ್ಲಿ ಮೊದಲ ಕನ್ನಡ ಚಿತ್ರಕ್ಕೆ ಧ್ವನಿ

ಅಂದಹಾಗೆ, ರೀಷ್ಮಾ ನಾಣಯ್ಯ ನಾಯಕಿಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರದಲ್ಲಿ ಶ್ರೇಯಸ್‌ ಕೆ. ಮಂಜು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಂದ ಕಿಶೋರ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಈ ಚಿತ್ರದ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ. ಕೆಲ ದಿನಗಳಿಂದ ಶ್ರೇಯಸ್‌ ಹಾಗೂ ನಂದಕೀಶೋರ್‌ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಚಿತ್ರತಂಡ ಮಾತ್ರ ಈ ಸುದ್ದಿಯನ್ನು ಖಚಿತಪಡಿಸಿರಲಿಲ್ಲ. ಇದೀಗ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆ ಬಹುತೇಕ ಖಚಿತವಾಗಿದೆ ಎಂದಿದೆ ಚಿತ್ರತಂಡ.

ಇದನ್ನೂ ಓದಿ: ಇಂದು ಡಾ. ರಾಜಕುಮಾರ್‌ 15ನೇ ಪುಣ್ಯಸ್ಮರಣೆ

ಸದ್ಯ ಈ ಹೊಸಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಕೆ. ಮಂಜು ಮತ್ತು ಗುಜ್ಜಾಲ್‌ ಪುರುಷೋತ್ತಮ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ಈ ಚಿತ್ರದ ಕಥಾಹಂದರ, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಒಟ್ಟಾರೆ ಮಾಡೆಲ್‌ ಕ್ಷೇತ್ರದಿಂದ ಸಿನಿರಂಗಕ್ಕೆ ಎಂಟ್ರಿಕೊಟ್ಟಿರುವ ರೀಷ್ಮಾ, ತಮ್ಮ ಚೊಚ್ಚಲ ಸಿನಿಮಾ ತೆರೆಕಾಣುವ ಮೊದಲೇ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗುವ ಮೂಲಕ ಸಿನಿಮಂದಿಯ ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next