ಬೆಂಗಳೂರು: ಕಳೆದ ವರ್ಷ ಖಾಸಗಿ ಶಾಲೆಗಳು ಪೂರ್ಣ ಪ್ರಮಾಣದ (ಶೇ.100) ಬೋಧನ ಶುಲ್ಕವನ್ನು ಪಡೆದಿದ್ದರೆ, ಶೇ.15ರಷ್ಟನ್ನು ಹಿಂದಿರುಗಿಸುವಂತೆ ಸರಕಾರ ಆದೇಶಿಸಿದೆ.
ಹೆಚ್ಚುವರಿ ಶುಲ್ಕವನ್ನು ಹಿಂದಿರು ಗಿಸಬೇಕು ಅಥವಾ 2021-22ನೇ ಸಾಲಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೆಂದು ಆದೇಶದಲ್ಲಿ ತಿಳಿಸಿದೆ.
ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಇತರ ಪಠ್ಯ ಕ್ರಮದ ಖಾಸಗಿ ಶಾಲೆಗಳಿಗೆ ಅನ್ವಯಿಸುವಂತೆ ಶೇ.30ರಷ್ಟು ಶುಲ್ಕ ಕಡಿತ ಮಾಡಿ 2021ರ ಜ.29ರಂದು ಆದೇಶ ಹೊರಡಿಸಿತ್ತು. ಇದನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ವಿಚಾರಣೆ ನಡೆಸಿದ ಹೈಕೋರ್ಟ್, ಶೇ.15ರಷ್ಟು ಶುಲ್ಕ ಕಡಿತ ಮಾಡಿ ಸೆ.16ರಂದು ಆದೇಶ ಹೊರಡಿಸಿತ್ತು. ಆದರೆ, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕೋರ್ಟ್ ಆದೇಶವನ್ನು ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸ್ಪಷ್ಟ ಆದೇಶಕ್ಕೆ ಕ್ಯಾಮ್ಸ್ ಆಗ್ರಹ :
ಶುಲ್ಕ ಕಡಿತದ ಸಂಬಂಧಿಸಿ ಇಂಗ್ಲಿಷ್‌ನಲ್ಲಿ ಸರಿಯಾಗಿ ಆದೇಶ ಹೊರಡಿ ಸಿರುವ ಸರಕಾರ, ಕನ್ನಡದ ಬರವಣಿಗೆಯಲ್ಲಿ ಎಡವಟ್ಟು ಮಾಡಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ. ಶುಲ್ಕಕ್ಕೆ ಸಂಬಂಧಿಸಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹೇಳಿರುವಂತೆ, ಶಾಲಾ ವಾರ್ಷಿಕ ಶುಲ್ಕದಲ್ಲಿ ಶೇ.15ರಷ್ಟು ಕಡಿತ ಎಂಬುದನ್ನು ಇಂಗ್ಲಿಷ್‌ನಲ್ಲಿ ಯಥಾಸ್ಥಿತಿಯಲ್ಲಿ ಹಾಕಲಾಗಿದೆ. ಆದರೆ, ಕನ್ನಡದಲ್ಲಿ ಮಾಸಿಕ ಶುಲ್ಕ ಮಾತ್ರ ಪಡೆಯ ಬೇಕು ಎಂದು ನಮೂದಿಸಿ ನ್ಯಾಯಾಲಯದ ಆದೇಶವನ್ನು ಉಲ್ಲಂ ಸಲಾಗಿದೆ ಎಂದು ಪ್ರಕಟನೆಯಲ್ಲಿತಿಳಿಸಿದ್ದಾರೆ.