Advertisement

ಇ- ಆಡಳಿತ ಜಾರಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ

11:51 AM Mar 26, 2017 | |

ಭ್ರಷ್ಟಾಚಾರ ಅತಿ ಹೆಚ್ಚು ಇರುವುದೇ ಬಿಬಿಎಂಪಿಯಲ್ಲಿ. ಆದ್ದರಿಂದ ಇಲ್ಲಿ ಇ-ಆಡಳಿತ ಅತ್ಯಗತ್ಯ. ಪಾರದರ್ಶಕ ಆಡಳಿತದ ದೃಷ್ಟಿಯಿಂದ ಸಕಾಲ ಮಾದರಿಯಲ್ಲಿ ಎಲ್ಲ ಸೇವೆಗಳನ್ನೂ “ಇ-ಆಡಳಿತ’ಕ್ಕೆ ಪರಿವರ್ತಿಸಬೇಕು. ಈ ನಿಟ್ಟಿನಲ್ಲಿ ಕಾಗದರಹಿತ ಆಡಳಿತ ಸೇರಿದಂತೆ ಪೂರಕ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ. ಆದರೆ, ಇದಕ್ಕೂ ಕೊಕ್ಕೆ ಹಾಕುವವರು ಇದ್ದಾರೆ. ಆದ್ದರಿಂದ ಅಧಿಕ ಸಾಮರ್ಥ್ಯದ ಇ-ಆಡಳಿತವನ್ನು ರೂಪಿಸಬೇಕು.

Advertisement

ಇದಕ್ಕೆ ಮುಖ್ಯ ತಾಂತ್ರಿಕ ಅಧಿಕಾರಿಯನ್ನೂ ನೇಮಿಸಬೇಕು. ಆಗ ಮಾತ್ರ ಯೋಜನೆ ಉದ್ದೇಶ ಸಾಕಾರಗೊಳ್ಳುತ್ತದೆ. ಬೆಂಗಳೂರು ಒಂದು ಐಟಿ ಹಬ್‌. ಆದರೆ, ಇಲ್ಲಿನ ಮಹಾನಗರ ಪಾಲಿಕೆಯಲ್ಲೇ ಇನ್ನೂ ಅದರ ಸಮರ್ಪಕ ಬಳಕೆ ಆಗುತ್ತಿಲ್ಲ. ಯಾಕೆಂದರೆ, ಅಧಿಕಾರಿಗಳ ಉದ್ದೇಶಪೂರ್ವಕ ನಿರಾಸಕ್ತಿಯೂ ಕಾರಣವಾಗಿದೆ. ಬಜೆಟ್‌ನಲ್ಲಿಯ ಘೋಷಣೆಗಳು ತಕ್ಕಮಟ್ಟಿಗಾದರೂ ಅನುಷ್ಠಾನಗೊಂಡರೆ ಸಾಕಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.
-ಟಿ.ವಿ. ಮೋಹನದಾಸ್‌ ಪೈ, ಮಾಜಿ ಮುಖ್ಯ ಹಣಕಾಸು ಅಧಿಕಾರಿ, ಇನ್ಫೋಸಿಸ್‌. 

Advertisement

Udayavani is now on Telegram. Click here to join our channel and stay updated with the latest news.

Next