ಹೊಸದಿಲ್ಲಿ: ಈ ವರ್ಷದ ಮಧ್ಯಭಾಗದಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಲ್ಲಿ ನಿಯಂತ್ರಣಕ್ಕೆ ತರಲು ಆಗಸ್ಟ್‌ನ ಕೊನೆಯ ವಾರದಲ್ಲಿ ಮೊದಲ ಬಾರಿಗೆ ಮೀಸಲು ದಾಸ್ತಾನಿನಿಂದ ಈರುಳ್ಳಿ ಬಿಡುಗಡೆ ಮಾಡಲಾಗಿತ್ತು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈಗ, ಟೊಮೆಟೊ ಹಾಗೂ ಆಲೂಗಡ್ಡೆಗಳ ಬೆಲೆಗಳು ಹೆಚ್ಚಾಗಿದ್ದು ಅವನ್ನೂ ಇದೇ ರೀತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.
ಹಾಗಾಗಿಯೇ ಅ. 14ರ ಮಾಹಿತಿಯ ಪ್ರಕಾರ ಮೆಟ್ರೋಪಾಲಿಟನ್ ನಗರಗಳಲ್ಲಿ ಕೆ.ಜಿ.ಗೆ 42ರಿಂದ 57 ರೂ. ಬೆಲೆಯಲ್ಲಿ ಈರುಳ್ಳಿ ಸಿಗುತ್ತಿದೆ.
ಇಡೀ ಭಾರತದಲ್ಲಿ ಈರುಳ್ಳಿಯ ಸರಾಸರಿ ಬೆಲೆ ಪ್ರತೀ ಕೆ.ಜಿ.ಗೆ 37 ರೂ. ಇದೆ ಎಂದು ಸಚಿವಾಲಯ ಇತಳಿಸಿದೆ.
ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ