Advertisement

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಡಿವಾಣ ಅನಿವಾರ್ಯ

01:15 AM May 19, 2021 | Team Udayavani |

ಸತತ ನಾಲ್ಕು ವರ್ಷಗಳಿಂದ ಮುಂಗಾರು ಪೂರ್ವದಲ್ಲಿಯೇ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಮೂಲಕ ದೇಶದ ಪಶ್ಚಿಮ ಕರಾವಳಿಯ ಜನರನ್ನು ಆತಂಕಕ್ಕೀಡು ಮಾಡುತ್ತಲೇ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಮುಂಗಾರು ಪೂರ್ವ ಚಂಡಮಾರುತ ಗಳು ಕಡಲತಡಿಯ ಸನಿಹವೇ ಹಾದುಹೋಗಿವೆ. ವರ್ಷಗಳುರುಳಿ ದಂತೆಯೇ ಅರಬಿ ಸಮುದ್ರ ಮತ್ತು ಬಂಗಾಲ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಅರಬಿ ಸಮುದ್ರದಲ್ಲಿ ಎದ್ದ ತೌಖೆ¤à ಚಂಡಮಾರುತ ದೇಶದ ಪಶ್ಚಿಮ ಕರಾವಳಿಯ ರಾಜ್ಯ ಗಳನ್ನು ಹೈರಾಣಾಗಿಸಿದೆ. ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಈ ಭೀಕರ ಚಂಡಮಾರುತದ ಹೊಡೆತ ಅನುಭವಿಸಿದ್ದು ವ್ಯಾಪಕ ನಷ್ಟ ಸಂಭವಿಸಿದೆ.

Advertisement

ದಶಕಗಳ ಹಿಂದೆ ಆಗೊಮ್ಮೆ ಈಗೊಮ್ಮೆ ಅರಬಿ ಸಮುದ್ರದಲ್ಲಿ ಚಂಡಮಾರುತಗಳು ಸೃಷ್ಟಿಯಾಗುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಚಂಡಮಾರುತದ ವಿಚಾರದಲ್ಲಿ ಇದು ಬಂಗಾಲ ಕೊಲ್ಲಿಗೆ ಸಡ್ಡು ಹೊಡೆಯಲಾರಂಭಿಸಿದೆ. ಬಂಗಾಲಕೊಲ್ಲಿ ಸಮುದ್ರದ ಮೇಲ್ಮೆ„ ತಾಪಮಾನ ಹೆಚ್ಚಿರುವುದರಿಂದಾಗಿ ಸಮುದ್ರ ಮಧ್ಯೆ ಸೃಷ್ಟಿಯಾಗುವ ವಾಯುಭಾರ ಕುಸಿತಗಳು ಚಂಡಮಾರುತವಾಗಿ ಮಾರ್ಪಾಡು­ಗೊಳ್ಳುವುದು ಸಾಮಾನ್ಯ. ಆದರೆ ಅರಬಿ ಸಮುದ್ರದಲ್ಲಿ ಇತ್ತೀಚಿನ ವರ್ಷಗಳವರೆಗೆ ಇಂತಹ ಸನ್ನಿವೇಶ ಇರಲಿಲ್ಲ. ಆದರೆ ಇದೀಗ ವರ್ಷ ಗಳುರುಳಿದಂತೆಯೇ ಅರಬಿ ಸಮುದ್ರದಲ್ಲಿಯೂ ಕೂಡ ಚಂಡ ಮಾರುತಗಳು ಸೃಷ್ಟಿಯಾಗಿ ಕರಾವಳಿ ತೀರದ ನಿವಾಸಿಗಳು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡುತ್ತಿವೆ. ಅರಬಿ ಸಮುದ್ರದಲ್ಲಿ ಚಂಡಮಾರುತ ಹೆಚ್ಚಾಗಲು ಹವಾಮಾನ ಬದಲಾವಣೆಗೂ ನೇರ ಸಂಬಂಧವಿದೆ. ಸಮುದ್ರದ ಮೇಲ್ಮೆ„ ತಾಪಮಾನ 28 ಡಿ.ಸೆ. ದಾಟಿದರೆ ವಾಯುಭಾರ ಕುಸಿತಗಳು ಚಂಡಮಾರುತವಾಗಿ ಪರಿವರ್ತಿತವಾಗುವ ಸಾಧ್ಯತೆಗಳು ಹೆಚ್ಚು. ಈಗ ಅರಬಿ ಸಮುದ್ರದಲ್ಲಿ ಇಂಥ ಸ್ಥಿತಿ ನಿರ್ಮಾಣÊ­ಾ ಗುತ್ತಿದೆ ಎಂದು ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಹೇಳಿದ್ದಾರೆ.

ಅರಬಿ ಸಮುದ್ರದಲ್ಲಿ ಈ ಬಾರಿ ಸೃಷ್ಟಿಯಾದ ತೌಖೆ¤à ಚಂಡಮಾರುತ ಕಳೆದ ಮೂರು ದಶಕಗಳಲ್ಲಿಯೇ ಅತ್ಯಂತ ವೇಗದಲ್ಲಿ ದೇಶದ ಪಶ್ಚಿಮ ಕರಾವಳಿಗೆ ಮುನ್ನುಗ್ಗಿ ಅಪ್ಪಳಿಸಿದೆ. ಇಂಗಾಲದ ಹೊರಸೂಸುವಿಕೆ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಸಮುದ್ರದ ಮೇಲ್ಮೆ„ ತಾಪಮಾನ ಏರಿಕೆಯಾಗುತ್ತಲೇ ಇದೆ. ತಾಪಮಾನ ಏರಿಕೆಗೆ ಕಡಿವಾಣ ಹಾಕದೇ ಹೋದಲ್ಲಿ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಪಾಯಕಾರಿ ಯಾದ ಚಂಡಮಾರುತಗಳು ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಗೆ ಬಡಿದಪ್ಪಳಿಸಲಿವೆ ಎಂಬ ಎಚ್ಚರಿಕೆಯನ್ನೂ ತಜ್ಞರು ಇದೇ ವೇಳೆ ನೀಡಿದ್ದಾರೆ.

ಕಳೆದೆರಡು ದಶಕಗಳಿಂದ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳದ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯ­ವಾಗಿಲ್ಲ. ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ನಾನಾ ರೀತಿಯ ಸಮಸ್ಯೆ, ಸಂಕಷ್ಟಗಳನ್ನು ಮನುಕುಲ ಎದುರಿಸುತ್ತಿದೆ. ನೈಸರ್ಗಿಕ ಪ್ರಕ್ರಿಯೆ­ಗಳು ಅಸ್ತವ್ಯಸ್ತಗೊಂಡಿದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಈ ಬಗ್ಗೆ ಈಗಲೇ ಎಚ್ಚರಿಕೆಯಿಂದ ಇರುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next