Advertisement

ನೀರು ಇಲ್ಲದ ಮಣ್ಣಿನಲ್ಲಿ ಸತ್ವ ಕಡಿಮೆ: ಕೃಷಿ ತಜ್ಞರು

12:40 AM Sep 13, 2019 | sudhir |

ಬ್ರಹ್ಮಾವರ: ಉದಯವಾಣಿಯ ಜಲಸಾಕ್ಷರತೆಯ ಅಭಿಯಾನದಿಂದ ಪ್ರೇರಿತವಾಗಿ ಬಾರಕೂರು ರೈಲ್ವೆ ಸ್ಟೇಷನ್‌ ಹತ್ತಿರದ ನಿವಾಸಿ ಪಿ. ಜಯರಾಮ ರಾವ್‌ ಅವರು ನೀರಿನ ಸಂರಕ್ಷಣೆಗಾಗಿ ಛಾವಣಿ ನೀರು ಕೊಯ್ಲು ಹಾಗೂ ಇಂಗುಗುಂಡಿ ಜಂಟಿಯಾಗಿ ಕೈಗೊಂಡಿ ದ್ದಾರೆ.

Advertisement

ವಿಸ್ತಾರದಲ್ಲಿ ಬಿದ್ದು ನೀರು ಇಂಗಿಸುವಿಕೆ ಗಾಗಿ ಒಂದು ದೊಡ್ಡ ಗುಂಡಿ ನಿರ್ಮಿಸಿದ್ದಾರೆ. 20 ಅಡಿ ಉದ್ದ, 30 ಅಡಿ ಅಗಲ, 3 ಅಡಿ ಆಳವಿದೆ. ಇದರಲ್ಲಿ 2 ಅಡಿ ನೀರು ತುಂಬಿದ ಅನಂತರ ಇದರ ನೀರನ್ನು 10 ಅಡಿ ಉದ್ದದ ಯುಕೆ ಪೈಪ್‌ ಅಳವಡಿಸಿ ಅದನ್ನು 8×10ರ ಇನ್ನೊಂದು ಇಂಗು ಗುಂಡಿಗೆ ಹೋಗುವಂತೆ ಮಾಡಲಾಗಿದೆ.

ಈ ಇಂಗುಗುಂಡಿಯ ಆಳ ಸಾಧಾರಣ 6 ಅಡಿ ಇದೆ.ಇದು ಬಾವಿಯಿಂದ ಕೇವಲ 12 ಅಡಿ ದೂರದಲ್ಲಿದೆ. ಆದ್ದರಿಂದ ಇಲ್ಲಿ ಇಂಗಿದ ನೀರು ಸೀದಾ ಬಾವಿಯ ಸಂಪರ್ಕ ಪಡೆದುಕೊಳ್ಳುತ್ತಿದೆ.

ಚಿಂತನೆ

ನನ್ನಲ್ಲಿ ಈ ಚಿಂತನೆಯು 2-3 ವರ್ಷಗಳ ಮೊದಲೇ ಬಂದಿತ್ತು. ಈ ರೀತಿಯಲ್ಲಿ ನೀರನ್ನು ಇಂಗಿಸುವುದರಿಂದ ಭೂಮಿ ತಾಯಿಯ ಸೇವೆ ಮಾಡಿದಂತೆ ಆಗುತ್ತದೆ ಎನ್ನುತ್ತಾರೆ ಜಯರಾಮ ರಾವ್‌.

Advertisement

ಯಾವುದೇ ಮಣ್ಣಿಗೆ ನೀರೇ ಆಹಾರ. ಮಣ್ಣಿನ ಗುಣಮಟ್ಟ ಕಡಿಮೆ ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಮಣ್ಣಿನಲ್ಲಿ ನೀರಿದ್ದರೆ ಮಾತ್ರ ಎರೆಹುಳುಗಳಂತಹ ಅನೇಕ ಉಪಕಾರಿ ಹುಳು ಉತ್ಪತ್ತಿಯಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ. ಹರಿದು ಬರುವ ನೀರಿನಲ್ಲಿ ಬರುವಂತಹ ಮೆದು ಮಣ್ಣು (ಹೊಯಿಗೆ ಮಿಶ್ರಿತ) ನಮ್ಮ ಹೂವಿನ ಗಿಡ,ತೆಂಗಿನ ಮರ ಇವುಗಳಿಗೆ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next