Advertisement
ಲಾಕ್‌ಡೌನ್ ಪರಿಣಾಮವಾಗಿ ನಗರದಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಮಾಲ್‌ಗಳು, ವಾಣಿಜ್ಯ ಕಟ್ಟಡಗಳು, ಕೆಲವೊಂದು ಹೊಟೇಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪ ಸಹಿತ ವಿವಿಧ ವಲಯಗಳು ಮುಚ್ಚಿವೆ. ಸಾಮಾನ್ಯವಾಗಿ ಈ ವಲಯಗಳಿಂದ ಹೆಚ್ಚಾಗಿ ಕಸ ಉತ್ಪಾದನೆಯಾಗುತ್ತದೆ. ಇದೀಗ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡ ಪರಿಣಾಮ ಕಸ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಸಾರ್ವಜನಿಕ ಸಂಚಾರ ಕಡಿಮೆಯಾಗಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಅಂಗಡಿಗಳಲ್ಲಿ ವ್ಯಾಪಾರವಿಲ್ಲ. ಹಾಸ್ಟೆಲ್ ಅಥವಾ ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ಬಹುತೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಮನೆಗಳಿಗೆ ತೆರಳಿದ್ದಾರೆ. ಇದೂ ಕೂಡ ಕಸ ಸಂಗ್ರಹ ಇಳಿಕೆಗೆ ಕಾರಣ ಎನ್ನಬಹುದು.
Related Articles
Advertisement
ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ವಿಂಗ ಡಿಸಿ ಮೂಲದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಕೆಲವೊಂದು ಸಂಸ್ಥೆಗಳಲ್ಲಿ ಮಾತ್ರ ಘಟಕ ಸ್ಥಾಪಿಸಿ ತ್ಯಾಜ್ಯ ಸಂಸ್ಕರಣೆಗೊಳಿ ಸಲಾಗುತ್ತಿದೆ. ಉಳಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರು ಪಾಲಿಕೆಯ ಸೂಚನೆ ಪಾಲನೆ ಮಾಡಿರುವುದಿಲ್ಲ. ಮೇ 15ರೊಳಗೆ ಕಡ್ಡಾಯ ವಾಗಿ ಅನುಷ್ಠಾನಗೊಳಿಸಬೇಕು ಎಂದು ಪಾಲಿಕೆ ಈಗಾಗಲೇ ಸಂಬಧಂಪಟ್ಟವರಿಗೆ ಸೂಚನೆ ನೀಡಿದೆ.
ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ಲಾಕ್‌ಡೌನ್ ಮಾದರಿ ಕರ್ಫ್ಯೂ ಹೇರಿಕೆಯಾದಾಗಿನಿಂದ ಮಂಗಳೂರಿನ ಕಸ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ನಗರದ ಮಾಲ್‌ಗಳು, ಕೆಲವೊಂದು ಹೊಟೇಲ್‌ಗಳು, ವಾಣಿಜ್ಯ ಕಟ್ಟಡಗಳು ಬಂದ್ ಆಗಿದ್ದು, ಈ ಪರಿಣಾಮ ಕಸ ಸಂಗ್ರಹ ಕಡಿಮೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 320ರಿಂದ 340 ಟನ್ ಸಂಗ್ರಹವಾಗುತ್ತಿದ್ದು, ಸದ್ಯ ಸುಮಾರು ಸರಾಸರಿ 225 ಟನ್ ಸಂಗ್ರಹವಾಗುತ್ತಿದೆ. –ಪ್ರೇಮಾನಂದ ಶೆಟ್ಟಿ, ಪಾಲಿಕೆ ಮೇಯರ್