Advertisement
ಸೋಮವಾರ ತಡರಾತ್ರಿ, ಮಂಗಳವಾರ ಸಂಜೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಕಾರ್ಕಳ, ಕುಂದಾಪುರ, ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಸಿದ್ದಾಪುರ, ಹೆಬ್ರಿ ಸಹಿತ ಹಲವೆಡೆ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲು ವಾತಾವರಣವಿದ್ದು, ಅನಂತರ ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ.
ನಗರಸಭೆ ಎದುರಿನ ಸರಕಾರಿ ಶಾಲೆ ಹಾಗೂ ಬನ್ನಂಜೆ ನಾರಾಯಣ ಗುರು ಮಂದಿರದಲ್ಲಿ ಕಾಳಜಿ ಕೇಂದ್ರ ಗುರುತಿಸಲಾಗಿತ್ತು. ಆದರೆ ಯಾರೂ ಇಲ್ಲಿಗೆ ಬಾರದ ಹಿನ್ನೆಲೆಯಲ್ಲಿ ಅಲ್ಲಿ ಸೇವೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರನ್ನು ಮಥುರಾ ಕಂಫರ್ಟ್‌ಗೆ ಕಳುಹಿಸಿದ್ದೇವೆ ಎಂದು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಹಾಗೂ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
Related Articles
Advertisement
ಮಳೆ ಪ್ರಮಾಣ ಕಡಿಮೆ ಇದ್ದರೂ ಗಾಳಿ ಮಳೆಗೆ ಕೆಲವು ಕಡೆಗಳಲ್ಲಿ ಮನೆ ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಕಾಳಾವರ, ಕೋಟೇಶ್ವರ, ತಲ್ಲೂರು, ಕಾರ್ಕಳ ತಾಲೂಕಿನ ಬೋಳ, ಹಿರ್ಗಾನ , ಮುಡಾರು, ಬೈಂದೂರು ತಾಲೂಕಿನ ಕಂಬದಕೋಣೆ, ಉಡುಪಿ ತಾಲೂಕಿನ ಕೊರಂಗ್ರಪಾಡಿಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಕಾವ್ರಾಡಿ, ಕೆರಾಡಿ, ಗುಜ್ಜಾಡಿಯಲ್ಲಿ ಮೂರು ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ಹಾರ್ದಳ್ಳಿಯಲ್ಲಿ ಭತ್ತದ ಗದ್ದೆಗೆ ಹಾನಿ ಸಂಭವಿಸಿದೆ.
ಕಾರ್ಕಳ 78.2, ಕುಂದಾಪುರ 53.8, ಉಡುಪಿ 83.1, ಬೈಂದೂರು 55.1, ಬ್ರಹ್ಮಾವರ 74.4, ಕಾಪು 98.8, ಹೆಬ್ರಿ 55.1 ಮಿ. ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 66.7 ಮಿ. ಮೀ. ಮಳೆಯಾಗಿದೆ.