ಚೆನ್ನೈ/ಹೊಸದಿಲ್ಲಿ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಮಂಗಳವಾರ ಕಡಿಮೆಯಾಗಿದೆ.ಆದರೆ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಟೊಮೊಟೊ ಬೆಲೆಯಲ್ಲಿ ಮಾತ್ರ ಭಾರೀ ಏರಿಕೆಯಾಗಿದೆ.
ಆಂಧ್ರದಲ್ಲಿ 58,000 ಹೆಕ್ಟೇರ್ ಪ್ರದೇಶದಲ್ಲಿ 26.67 ಲಕ್ಷ ಮೆಟ್ರಿಕ್ ಟನ್ ಟೊಮೊಟೊ ಬೆಳೆಯಲಾಗುತ್ತದೆ.ಮಳೆಯಿಂದಾಗಿ ರಾಜ್ಯದ 20 ಲಕ್ಷ ಎಕರೆ ಬೆಳೆ ಹಾನಿಯಾಗಿದೆ.
ಆ ಹಿನ್ನೆಲೆಯಲ್ಲಿ ಅಲ್ಲಿ ಮಾತ್ರವಲ್ಲದೆ, ಅಲ್ಲಿಂದ ಟೊಮೊಟೊ ರಫ್ತಾಗುತ್ತಿದ್ದ ಚೆನ್ನೈಯಲ್ಲಿ ಟೊಮೊಟೊ ಬೆಲೆ ಏರಿಕೆಯಾಗಿದೆ. ಆಂಧ್ರದಲ್ಲಿ ಕೆ.ಜಿ.ಗೆ 100 ರೂ. ದಾಟಿದ್ದರೆ, ಚೆನ್ನೈಯಲ್ಲಿ 140 ರೂ. ದಾಟಿದೆ. ಹೊಸದಿಲ್ಲಿಯಲ್ಲಿ 80 ರೂ.ಗೆ ಏರಿದೆ.
ಇನ್ನೊಂದೆಡೆ ತಿರುಪತಿಯ ಕೆಲವು ಪ್ರದೇಶಗಳಲ್ಲಿ ಇನ್ನೂ ನೀರು ತಗ್ಗಿಲ್ಲ.ವಾಯುಭಾರ ಕುಸಿತದಿಂದಾಗಿ 5 ದಿನ ಚೆನ್ನೈ ಮತ್ತು ಅದರ 3 ನೆರೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ:ಕಾಂಪ್ಲೆಕ್ಸ್ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್