Advertisement
ಬೆಂಗಳೂರಿಗೆ ತಾಕಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ 2018ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 14ನೇ ಸ್ಥಾನದಲ್ಲಿದ್ದಿತ್ತು. ಈ ಬಾರಿ ಅಲ್ಲಿನ ವಿದ್ಯಾರ್ಥಿಗಳ ವಿಶೇಷ ಸಾಧನೆ ಎಂಬಂತೆ ಮೂರನೇ ಸ್ಥಾನಕ್ಕೆ ಜಿಲ್ಲೆಯನ್ನು ಕೊಂಡೊಯ್ದಿದ್ದಾರೆ.
Related Articles
Advertisement
ವಿದ್ಯಾರ್ಥಿಗಳ ಫಲಿತಾಂಶ ಸರಾಸರಿ ಮಾತ್ರವಲ್ಲ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಆಧಾರದಲ್ಲಿ ಗುಣಮಟ್ಟದ ಸ್ಥಾನ ಮಾನದಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆ 32ನೇ ಸ್ಥಾನಕ್ಕೆ ಇಳಿದಿದೆ. ಗುಣಮಟ್ಟದ ವಿಭಾಗದಲ್ಲಿ ಕಳೆದ ವರ್ಷ 27ನೇ ಸ್ಥಾನದಲ್ಲಿದ್ದ ಈ ಜಿಲ್ಲೆ ಈ ವರ್ಷ 32ಕ್ಕೆ ಇಳಿದಿದೆ. ಇನ್ನು ಬೆಂಗಳೂರು ಉತ್ತರ ಜಿಲ್ಲೆ ಗುಣಮಟ್ಟದಲ್ಲಿ ಒಂದು ಸ್ಥಾನ ಮೇಲೆರಿದೆ. 2018ರಲ್ಲಿ 22ರಲ್ಲಿದ್ದು, ಈಗ ಅದು 21ಕ್ಕೆ ಏರಿದೆ.
ರಾಜಧಾನಿಯ ಬಹುತೇಕ ಖಾಸಗಿ ಶಾಲೆಗಳು ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮ ಹೊಂದಿದ್ದರು, ಕೆಲವೊಂದು ಶಾಲೆಗಳು ರಾಜ್ಯ ಪಠ್ಯಕ್ರಮ ಹೊಂದಿವೆ. ಅಲ್ಲದೆ ಬಹುತೇಕ ಅನುದಾನಿತ ಶಾಲೆಗಳು ಮತ್ತು ಎಲ್ಲ ಸರ್ಕಾರಿ ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಹೊಂದಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ತಂತ್ರಜ್ಞಾನವೂ ಅತಿ ಸುಲಭ ಮತ್ತು ವೇಗವಾಗಿ ಇಲ್ಲಿನ ವಿದ್ಯಾರ್ಥಿಗಳ ಕೈಗೆ ಸಿಗುತ್ತದೆ. ಅಲ್ಲದೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ನಗರ ಪ್ರದೇಶದಲ್ಲಿ ವಿಶೇಷ ಭತ್ಯೆ ಕೂಡ ನೀಡಲಾಗುತ್ತದೆ. ವರ್ಗಾವಣೆ ಸಂದರ್ಭದಲ್ಲೂ ನಗರ ಪ್ರದೇಶವನ್ನೇ ಆಯ್ದುಕೊಳ್ಳುತ್ತಾರೆ.
ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.