Advertisement
ನಂದಿನಿ ನದಿ ದಡದಲ್ಲಿ ನೂರಾರು ಎಕ್ರೆ ಕೃಷಿಭೂಮಿಯಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ನಂದಿನಿ ನದಿಯನ್ನೇ ಅವಲಂಬಿಸಿದ್ದಾರೆ. ಮೂಡುಬಿದಿರೆಯ ಕನಕಗಿಯಿಂದ ಹಳೆಯಂಗಡಿ ಸಮೀಪದ ಪಾವಂಜೆವರೆಗೆ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗಿದ್ದು ಪ್ರತೀ ವರ್ಷ ನವೆಂಬರ್ ಮೊದಲ ವಾರದಲ್ಲಿ ಅಣೆಕಟ್ಟುಗಳಿಗೆ ಬಾಗಿಲು ಹಾಕಲಾಗುತ್ತದೆ. ಅದರಂತೆ ಈ ಬಾರಿಯೂ ಅಣೆಕಟ್ಟುಗಳ ಬಾಗಿಲು ಹಾಕಲಾಗಿದ್ದು ನೀರಿನ ಹರಿವು ಕಡಿಮೆಯಾದುದರಿಂದ ನೀರು ಸಂಗ್ರಹಣೆಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ಪುಚ್ಚಾಡಿಯಲ್ಲಿ ಕಟ್ಟಲಾಗಿದ್ದ ಅಣೆಕಟ್ಟು ಹಿಂದಿನ ಕಾಲದಿಂದಲ್ಲೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ಪುಚ್ಚಾಡಿ ಅಣೆಕಟ್ಟಿಗೆ ಬಾಗಿಲು ಹಾಕಿದರೆ ಸಾವಿರಾರು ಎಕ್ರೆ ಕೃಷಿ ಪ್ರದೇಶಕ್ಕೆ ನೀರುಣಿಸುವುದು ಮಾತ್ರವಲ್ಲದೆ ನೂರಾರು ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ. ನೀರು ಸಂಗ್ರಹಣೆ ಕಡಿಮೆ
ಪ್ರತೀ ವರ್ಷದಂತೆ ಈ ಬಾರಿ ಪುಚ್ಚಾಡಿ ಅಣೆಕಟ್ಟಿಗೆ ನವೆಂಬರ್‌ನಲ್ಲಿ ಬಾಗಿಲು ಹಾಕಲಾಗಿದೆ. ಪ್ರತೀ ವರ್ಷ ಬಾಗಿಲು ಹಾಕಿದ ಮೂರು ಅಥವಾ ನಾಲ್ಕು ದಿನದಲ್ಲಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡು ತಗ್ಗು ಪ್ರದೇಶದ ಕೃಷಿ ಭೂಮಿಗೆ ನೀರು ಹರಿಯುತ್ತದೆ. ಆದರೆ ಈ ಬಾರಿ ಅಣೆಕಟ್ಟಿನ ಬಾಗಿಲು ಹಾಕಿದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹಣೆ ಆಗಿಲ್ಲ. ಇನ್ನೂ ಕೆಲವು ತಿಂಗಳಲ್ಲಿ ನೀರು ಸಂಗ್ರಹಣೆ ಕಡಿಮೆಯಾಗುವ ಸಾಧ್ಯತೆ ಇದ್ದು ರೈತರು ಕಂಗಾಲಾಗಿದ್ದಾರೆ.
Related Articles
ಅಣೆಕಟ್ಟು ಇಲ್ಲದ ದಿನಗಳಿಂದಲೂ ಪುಚ್ಚಾಡಿಯಲ್ಲಿ ಮಣ್ಣು ಮತ್ತು ಬೈಹುಲ್ಲಿನಿಂದ ಕಟ್ಟೆಯನ್ನು ಕಟ್ಟಿ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಆದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆಯಾಗಿದೆ.
– ಪ್ರಸನ್ನ ಎಲ್. ಶೆಟ್ಟಿ
ಅತ್ತೂರಗುತ್ತು, ಕಾರ್ಯದರ್ಶಿ,
ಪುಚ್ಚಾಡಿ ನೀರು ಬಳಕೆದಾರರ ಸಂಘ
Advertisement
ನೀರು ಖಾಲಿಯಾಗುವ ಸಾಧ್ಯತೆನೀರಿನ ಅಭಾವದಿಂದಾಗಿ ಈಗ ಸಮಸ್ಯೆ ಉದ್ಭವಿಸಿದೆ. ಒಂದು ತಿಂಗಳೊಳಗೆ ನೀರು ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದೆ.
– ಜನಾರ್ದನ ಕಿಲೆಂಜೂರು,
ಕಟೀಲು ಗ್ರಾ.ಪಂ. ಸದಸ್ಯರು