Advertisement
ಹಲವು ವರ್ಷಗಳಿಂದ ಅವೈಜ್ಞಾನಿಕ ಬಜೆಟ್ ಮಂಡನೆಯಾಗುತ್ತಿದ್ದು, ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ವರ್ಷ ಕೋವಿಡ್ ಸೋಂಕಿನಿಂದ ಪಾಲಿಕೆಯ ಆದಾಯ ಕುಸಿತ ಕಂಡಿದ್ದು, ವೈದ್ಯಕೀಯ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಬಜೆಟ್ ಮೊತ್ತ ಕಡಿಮೆ ಮಾಡುವ ಅನಿವ ರ್ಯತೆ ಸೃಷ್ಟಿಯಾಗಿದೆ.ಇದರಭಾಗವಾಗಿ ಕೆಲವು ನಿರ್ದಿಷ್ಟ ಕಾಮಗಾರಿಗಳು, ಮೂಲಸೌಕರ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಪಾಲಿಕೆಯ 2020-21ನೇ ಸಾಲಿನ ಬಜೆಟ್ ಪರಿಷ್ಕರಣೆ ಮಾಡಿ ವೈಜ್ಞಾನಿಕ ಬಜೆಟ್‌ಮಂಡನೆಮಾಡುವುದಾಗಿ ಆಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Related Articles
Advertisement
ಕತ್ತರಿ ಹಾಕುವುದು ಸವಾಲಿನ ಕೆಲಸ: ಬಿಬಿಎಂಪಿಯ ಬಜೆಟ್ ಪರಿಷ್ಕರಣೆ ಮಾಡುವ ಸಂಬಂಧ ಇಲ್ಲಿಯವರೆಗೆ ಬಿಬಿಎಂಪಿಯ ಎಲ್ಲ ವಿಭಾಗದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳು ನಡೆದಿವೆ. ಒಟ್ಟಾರೆಆರು ಬಾರಿ ಬಜೆಟ್ ಪರಿಷ್ಕರಣೆ ಟ್ರಯಲ್ ನೋಡ ಲಾಗಿದೆ! ಇಷ್ಟಾದರೂ ಪರಿಷ್ಕೃತ ಬಜೆಟ್ ಮಂಡನೆ ಮಾಡುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂಲಸೌಕರ್ಯಅನುದಾನಕ್ಕೆ ಕತ್ತರಿ ಹಾಕುವಂತಿಲ್ಲ,ಹಾಕದೆ ಅನ್ಯ ಮಾರ್ಗ ಇಲ್ಲ ಎನ್ನುವ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಪರಿಷತ್ ಪೀಠಕ್ಕಾಗಿ ತಳ್ಳಾಟ, ಗದ್ಗದಿತರಾದ ಹೊರಟ್ಟಿ:’ಚಿಂತಕರ ಚಾವಡಿ’ಯಲ್ಲಿ ನಡೆದಿದ್ದಿಷ್ಟು
ಹಣಕಾಸಿನ ಜವಾಬ್ದಾರಿ ಕಾಯ್ದೆ ಜಾರಿ: ಪಾಲಿಕೆಯ ಆದಾಯಕ್ಕೆಅನುಸಾರವಾಗಿಬಜೆಟ್ ಮಂಡನೆ ಮಾಡುವ ಉದ್ದೇಶದಿಂದ “ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯ್ದೆ -2002’ನ್ನು ಪಾಲಿಕೆ ಬಜೆಟ್‌ನಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಸ್ಥಳೀಯ ಆಡಳಿತದ ಆರ್ಥಿಕ ನಿರ್ವಹಣೆ ಮತ್ತು ನಿಗದಿಗಿಂತ ಹೆಚ್ಚು ಆದಾಯ ನಿರೀಕ್ಷೆ ತೋರಿಸುವುದಕ್ಕೆ ಇದು ಕಡಿವಾಣ ಹಾಕುತ್ತದೆ. ಈ ಕಾಯ್ದೆ ಸೇರಿಸುವುದರಿಂದ ನಿರೀಕ್ಷೆಗಿಂತ ಹೆಚ್ಚು ಆದಾಯ ತೋರಿಸುವಂತಿಲ್ಲ. ಹೀಗಾಗಿ, ಅನವಶ್ಯಕವಾಗಿ ಬಜೆಟ್ ಗಾತ್ರ ಹೆಚ್ಚಿಸುವುದು ಸಹ ತಪ್ಪಲಿದೆ ಎಂಬ ಮುಂದಾಲೋಚನೆ ಇದೆ.
ಬಿಬಿಎಂಪಿ ವಿಧೇಯಕ -2020 ಕಾಯ್ದೆಯಲ್ಲೂ ಉಲ್ಲೇಖ: ಸರ್ಕಾರ ಉಭಯ ಸದನಗಳಲ್ಲಿ ಮಂಡನೆ ಮಾಡಿರುವ ಕಾಯ್ದೆಯಲ್ಲೂ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ “ಸಮಗ್ರ ಋಣ ಮಿತಿ ನೀತಿ’ ರೂಪಿಸಲು ನಿರ್ದೇಶನ ನೀಡಲಾಗಿದೆ. ಇದರಂತೆಪಾಲಿಕೆ ಯಾವುದೇ ಸಾಲವನ್ನು ಮಾಡುವ ಮುನ್ನ ಸಮಗ್ರ ಋಣ ಮಿತಿ (ಪಾಲಿಕೆಯ ಆದಾಯ ಗಮನದಲ್ಲಿರಿಸಿಕೊಂಡು) ರೂಪಿಸಬೇಕಾಗುತ್ತದೆ.
ಪರಿಷ್ಕರಣೆಯಲ್ಲಿ ಪಾಲಿಕೆ ಮುಂದಿರುವ ಆಯ್ಕೆಗಳು :
- ಅನಗತ್ಯ ವೆಚ್ಚ ಮತ್ತು ಮೂಲಭೂತ ಸೌಕರ್ಯದ ಅನುದಾನಕ್ಕೆ ಕತ್ತರಿ
- ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದು
- ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳ ಸೇರ್ಪಡೆ ಮಾಡಬಹುದು.