Advertisement

ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ: ಜಯಶ್ರೀ ಮತ್ತಿಮಡು

01:22 PM Jul 27, 2022 | Team Udayavani |

ಶಹಾಬಾದ: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಜನರು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ, ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಹಚ್ಚ ಹಸಿರಾಗಿಸಲು ಪಣತೊಡಬೇಕೆಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.

Advertisement

ಮಂಗಳವಾರ ನಗರದ ಅಲ್ಸಟಾಂ ಕಾಲೋನಿಯ ಮೌಂಟ್‌ ಕಾರ್ಮೆಲ್‌ ಕಾನ್ವೆಂಟ್‌ ಶಾಲೆ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮ ಹಾಗೂ ಪರಿಸರದ ಕುರಿತ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್‌ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಅಲ್ಲದೇ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭೂಮಿಯ ಮೇಲೆ ಜೀವಿಗಳು ಉಳಿಯಬೇಕಾದರೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸಬೇಕಾದರೆ ಗಿಡಮರಗಳನ್ನು ಬೆಳೆಸಿ, ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ಮೌಂಟ್‌ ಕಾರ್ಮೆಲ್‌ ಕಾನ್ವೆಂಟ್‌ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್‌ ಲಿನೆಟ್‌ ಸಿಕ್ವೇರಿಯಾ ಮಾತನಾಡಿ, ನಗರೀಕರಣ, ಕೈಗಾರೀಕರಣಗ ಳಿಂದಾಗಿ ಹಳ್ಳಿಗಳು ನಗರಗಳಾಗುತ್ತಿವೆ. ಶುದ್ಧವಾದ ಮಣ್ಣು, ನೀರು ಮತ್ತು ಆಹಾರ ಸಿಗದಂತಾಗಿದೆ. ಪರಿಸರದಲ್ಲಿ ಹವಾಮಾನ ವೈಪರಿತ್ಯಕ್ಕೆ ಅತಿಯಾಗಿ ಬಳಸುತ್ತಿರುವ ಪ್ಲಾಸ್ಟಿಕ್‌ ಕೂಡ ಕಾರಣವಾಗಿದೆ. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಷೇದ ಮಾಡುವುದು ಸರ್ಕಾರದ ಕೆಲಸ. ಅದರ ಬಳಕೆ ನಿಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮೌಂಟ್‌ ಕಾರ್ಮೆಲ್‌ ಕಾನ್ವೆಂಟ್‌ ಶಾಲೆ ವ್ಯವಸ್ಥಾಪಕಿ ಸಿಸ್ಟರ್‌ ಅನುಪಮ ಮಾತನಾಡಿ, ಮಕ್ಕಳಲ್ಲಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಹಾಗೂ ಪರಿಸರದ ಕುರಿತು ಹೆಚ್ಚಿನ ಜ್ಞಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಅವರಿಂದಲೇ ನಗರದ ಮುಖ್ಯ ವೃತ್ತದಲ್ಲಿ, ಜನಸಂದಣಿ ಪ್ರದೇಶದಲ್ಲಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಮಕ್ಕಳು, ಪಾಲಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

Advertisement

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗಿರಥಿ ಗುನ್ನಾಪುರ, ಪಾಲಕ ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ ಭಗತ್‌ ವೇದಿಕೆ ಮೇಲಿದ್ದರು. ನಗರದ ಅಲ್ಸಟಾಂ ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ಮೌಂಟ ಕಾರ್ಮೆಲ್‌ ಕಾನ್ವೆಂಟ್‌ನ ವಿದ್ಯಾರ್ಥಿಗಳು ಸಂಚರಿಸಿ ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮದ ಕುರಿತು ಘೋಷಣೆ ಕೂಗಿದರು. ನಂತರ ಭಂಕೂರ ವೃತ್ತ, ಬಸವೇಶ್ವರ ವೃತ್ತ, ನೆಹರು ವೃತ್ತದಲ್ಲಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ನ ದುಷ್ಪರಿಣಾಮದ ಕುರಿತು ಕಿರುನಾಟಕ ಪ್ರಸ್ತುತಪಡಿಸಿದರು. ಗೀತೆಗಳನ್ನು ಹಾಡಿದರು. ನೃತ್ಯ ಪ್ರದರ್ಶಿಸಿದರು. ಶಿಕ್ಷರಾದ ಅನೀತಾ ಕುಲಕರ್ಣಿ, ಮೇರಿ, ಸುಮನ್‌ ಮೆಂಗನ್‌, ವಿಮಲಾ, ಸಾಹೇಬಗೌಡ ಪಾಟೀಲ, ಮೋರಿಟಾ, ಸಬರಿನಾ, ಗೌಡಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next