Advertisement
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರಿಗೆ ಇಲಾಖೆ, ವಿಟಿಯು ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ, ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿದ್ಯುತ್ ಚಾಲಿತ ವಾಹನಗಳ ಸುಸ್ಥಿರತೆ ಹಾಗೂ ಚಾರ್ಜಿಂಗ್ ಸೌಲಭ್ಯಗಳ ಅಭಿವೃದ್ಧಿ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಳಕೆ ಮಾಡಲು ಮುಂದಾದರೆ ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ಹೊಂದಿದಂತೆ ಆಗುತ್ತದೆ. ಕಲಬುರಗಿಯಂತ ಹೆಚ್ಚು ಬಿಸಿಲಿನ ಪ್ರದೇಶಗಳಲ್ಲಿ ಸೌರಶಕ್ತಿಯನ್ನು
ಸಮರ್ಥವಾಗಿ ಬಳಸಿಕೊಳ್ಳಬೇಕು. ಬೆಂಗಳೂರಿನಲ್ಲಿ 26 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳು ಮಾರಾಟವಾಗಿವೆ. ಕಲಬುರಗಿಯಲ್ಲಿ ಎಲೆಕ್ಟ್ರಿಕ್
ಆಟೋ, ಸ್ಕೂಟರ್ ಶೋರೂಮ್‌ಗಳಿದ್ದರೂ ಹೆಚ್ಚು ವಾಹನ ಮಾರಾಟವಾಗಿಲ್ಲ. ಈ ಕುರಿತಂತೆ ಮತ್ತಷ್ಟು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ
ಸ್ನೇಹಿ ವಾಹನಗಳ ಬಳಕೆಯಿಂದ ಪರಿಸರ ಕಾಳಜಿ ತೋರಿದಂತೆ ಆಗಲಿದೆ ಎಂದು ಹೇಳಿದರು.
Related Articles
ಸದ್ಯ ದೇಶದಲ್ಲಿ ಸೌರ ವಿದ್ಯುತ್ ಬಳಸಲು ಹೆಚ್ಚು ಗಮನ ಹರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
Advertisement
ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಹೆಬ್ಟಾಳ ಮಾತನಾಡಿ, ಪರಿಸರ ಕಾಳಜಿ ಹೊಂದುವುದು ಈಗಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳಲ್ಲಿನ ಸಾಧ್ಯತೆಗಳನ್ನು ಆವಿಷ್ಕರಿಸಲು ಪಿಡಿಎ ಕಾಲೇಜು ಮುಂಚೂಣಿಯಲ್ಲಿದೆ. ಇದಕ್ಕೆ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸಹಕಾರ ನೀಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ವಿಟಿಯು ಸಹ ಪ್ರಾಧ್ಯಾಪಕ ಎಂ.ಸಿ. ಮಠ ಮಾತನಾಡಿದರು. ನಂತರ ಇ-ಮೊಬಿಲಿಟಿ ಸುಸ್ಥಿರತೆ ಕುರಿತು ಎಲೆಕ್ಟ್ರಿಕ್ ವಾಹನಗಳ ಕನ್ಸ್‌ಲ್ಟಂಟ್ ಪ್ರಸಾದ್,ಹೀರೊ ಎಲೆಕ್ಟ್ರಿಕ್ ವಾಹನಗಳ ಕುರಿತು ಸಗರ್ ಕುಲಕರ್ಣಿ, ಎಲೆಕ್ಟ್ರಿಕ್ ಬಸ್ ಕುರಿತು ವಿಷ್ಣುವರ್ಧನ ರೆಡ್ಡಿ, ಎಲೆಕ್ಟ್ರಿಕ್ ವಾಹನಗಳಿಗೆ ಚಾಜಿಂìಗ್ ಮೂಲ ಸೌಕರ್ಯ ಕುರಿತು ಬೆಸ್ಕಾಂ ಡಿಜಿಎಂ ಶ್ರೀನಾಥ, ಎಲೆಕ್ಟ್ರಿಕ್ ವಾಹನಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ ನೀತಿ-2017 ಕುರಿತು ಶಿವರಾಜ ಪಾಟೀಲ ವಿಷಯ ಮಂಡಿಸಿದರು. ಉಪ ಸಾರಿಗೆ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ನೂರ ಮಹಮ್ಮದ್ ಭಾಷಾ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ, ಡಾ| ಶಂಭುಲಿಂಗಪ್ಪ, ವಿಟಿಯು ಕಾಲೇಜಿನ ಪ್ರಾಧ್ಯಾಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಾಹನಗಳಲ್ಲಿನ ಕಾರ್ಬನ್ ಪ್ರಮಾಣದಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಜನರಿಗೂ ಅಸ್ತಮಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರಾಜ್ಯದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ನಿಗದಿತ ಮಾನದಂಡಗಳನ್ನು ಮೀರುತ್ತಿದೆ. ಹೀಗಾಗಿ ಜಿಲ್ಲೆಗಳನ್ನು ಕೆಂಪು ವಲಯಗಳೆಂದು (ರೆಡ್ ಝೋನ್) ಗುರುತಿಸಲಾಗಿದೆ. ಈ ಕುರಿತಂತೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಶಿವರಾಜ ಬಿ. ಪಾಟೀಲ, ಅಪರ ಆಯುಕ್ತ, ರಾಜ್ಯ ಸಾರಿಗೆ ಇಲಾಖೆ