ಹೊಸದಿಲ್ಲಿ: ಉದ್ಯೋಗಿಗಳಿಗೆ ಗ್ರಾಚ್ಯುಯಿಟಿ ಅರ್ಹತಾ ಸೇವಾವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಬೇಕೆಂದು ಸಂಸತ್ತಿನ ಸ್ಥಾಯೀ ಸಮಿತಿಯೊಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಸಾಮಾಜಿಕ ನ್ಯಾಯ ವಿತರಣೆ 2019ರ ನಿಯಮಾವಳಿಗಳನ್ನು ರೂಪಿಸಲು ಬಿಜು ಜನತಾ ದಳದ ಸಂಸದ ಭಾರ್ತೃ ಹರಿ ಮಹ್ತಾಬ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಈ ಶಿಫಾರಸು ಮಾಡಿದೆ.
ಕೋವಿಡ್ 19 ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಉದ್ಯೋಗ ಆರಂಭಿಸಿ ಐದು ವರ್ಷ ಪೂರೈಸುವ ಮೊದಲೇ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಗ್ರಾಚ್ಯುಯಿಟಿ ಅರ್ಹತಾ ಅವಧಿಯನ್ನು ಇಳಿಸಬೇಕೆಂದು ಸಮಿತಿ ಹೇಳಿದೆ.
ಸಮಿತಿಯು ಸಿದ್ಧಪಡಿಸಿರುವ ಸಾಮಾಜಿಕ ನ್ಯಾಯ ವಿತರಣೆ 2019ರ ನಿಯಮಾವಳಿಗಳ ಕರಡು ಪ್ರತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಜು. 31ರಂದೇ ಸಲ್ಲಿಸಲಾಗಿದೆ.