Advertisement

ಬೆಡ್‌ ಕೊರತೆ ನೀಗಿಸಿ ಜನರ ಪ್ರಾಣ ಉಳಿಸಿ

09:43 PM May 19, 2021 | Team Udayavani |

ತಿಪಟೂರು: ಕಲ್ಪತರು ನಾಡಿನಗ್ರಾಮೀಣ ಭಾಗದಲ್ಲಿ ಕೋವಿಡ್‌ 2ನೇಅಲೆ ಆರೋಗ್ಯ ಇಲಾಖೆ ಹಾಗೂಅಧಿಕಾರಿಗಳ ನಿಯಂತ್ರಣ ತಪ್ಪಿದೆ.ಕೂಡಲೆ ತಾಲೂಕು ಆಡಳಿತ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಕ್ಸಿಜನ್‌ ಬೆಡ್‌ ಕೊರತೆ ಹಾಗೂ ಗ್ರಾಮೀಣಭಾಗದಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗಳ ಕೊರತೆಯನ್ನು ಕೂಡಲೇನೀಗಿಸಬೇಕು ಎಂದು ಕೆಪಿಸಿಸಿ ಕಾರ್ಮಿಕವಿಭಾಗದ ಪ್ರಧಾನಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್‌ ಒತ್ತಾಯಿಸಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಗೆಜಂಬೋ ಆಕ್ಸಿಜನ್‌ ಸಾಂದ್ರಕ ಯಂತ್ರವನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಕಳೆದ 15ದಿನಗಳಿಂದಲೂತಾಲೂಕಿನಗ್ರಾಮೀಣಭಾಗದಲ್ಲಿಸೋಂಕಿತರಸಂಖ್ಯೆಶೇ.35ದಾಟಿದ್ದು,ಅಮಾಯಕರೈತ ಕುಟುಂಬ ಅನಾಥವಾಗುತ್ತಿವೆ.ಸೋಂಕಿತರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್‌ಬೆಡ್‌ಗಳು ಸಿಗದೆ ಜೀವನ್ಮರಣದಲ್ಲಿ ಒದ್ದಾಡುವಂತಾಗಿದೆ. ಸೋಂಕಿತರ ಕುಟುಂಬಗಳನ್ನು ಹತ್ತಿರದಿಂದ ನೋಡಿದರೆ ದುಃಖಬರುತ್ತದೆ. ಆಕ್ಸಿಜನ್‌ ಬೆಡ್‌ಗಳಿಗಾಗಿಇಲ್ಲಿನವರು ಹಾಸನ, ತುಮಕೂರುಸೇರಿದಂತೆ ಬೆಂಗಳೂರುಗಳಲ್ಲಿ ಅಲೆಯುವಂತಾಗಿದೆ ಎಂದರು.

ಗ್ರಾಮೀಣ ಜನರು ಆರ್ಥಿಕವಾಗಿಸಂಕಷ್ಟದಲ್ಲಿರುವುದರಿಂದ ಕೋವಿಡ್‌ಚಿಕಿತ್ಸೆಪಡೆಯಲುಬಹಳಕಷ್ಟವಾಗುತ್ತಿದೆ.ಹಾಗಾಗಿ ಹಳ್ಳಿಗಳಲ್ಲಿ25ರಿಂದ45 ವರ್ಷಆಸುಪಾಸಿನ ಯುವಕರೇ ಹೆಚ್ಚು ಬಲಿಯಾಗುತ್ತಿದ್ದು, ಅವರನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬೀಳುತ್ತಿದೆ. ಇದನ್ನು ತಪ್ಪಿಸಲು ಸರ್ಕಾರಕೂಡಲೆ ಆಕ್ಸಿಜನ್‌ಕೊರತೆ ನೀಗಿಸಬೇಕು.

ಸಂಘ-ಸಂಸ್ಥೆಗಳು, ದಾನಿಗಳು ಕೈಜೋಡಿಸಬೇಕು ಎಂದರು.ಗ್ರಾಮೀಣ ಭಾಗದ ಅಮಾಯಕಜನರ ಪ್ರಾಣಕ್ಕೆ ಕುತ್ತು ಬರದಂತೆ ನೋಡಿಕೊಳ್ಳಲು ಮುಂದಿನ ದಿನಗಳಲ್ಲಿ ಮತ್ತಷ್ಟುವೈದ್ಯಕೀಯ ಪರಿಕರಗಳನ್ನು ನೀಡುತ್ತೇನೆಎಂದು ಭರವಸೆ ನೀಡಿದರು. ತಾಲೂಕುವೈದ್ಯಾಧಿಕಾರಿ ಡಾ.ಪ್ರಹ್ಲಾದ್‌, ಟಿಎಚ್‌ಒಡಾ.ರವಿಕುಮಾರ್‌, ಡಾ.ಸ್ವಾಮಿ, ಆಪ್ತಸಮಾಲೋಚಕ ಉಮೇಶ್‌, ಸಿಬ್ಬಂದಿರಾಘವ, ಮಂಜುನಾಥ್‌, ಸುದರ್ಶನ್‌ಗೊರಗೊಂಡನಹಳ್ಳಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next