Advertisement
ಬಾಗಲಕೋಟೆ ತಾಲೂಕು ವ್ಯಾಪ್ತಿಯಲ್ಲಿ ಈ ಮೊದಲಿದ್ದ 5 ಜಿಪಂ ಕ್ಷೇತ್ರ ಗಳು ಈ ಬಾರಿಯೂ ಅದೇ ಸಂಖ್ಯೆ ಮುಂದುವರಿದಿದ್ದು, ಶಿರೂರ ಬದಲಾಗಿ ಶಿಗಿಕೇರಿ ಹೊಸ ಕ್ಷೇತ್ರ ಮಾನ್ಯತೆ ಪಡೆಯಲಿದೆ.ಹಲವು ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳನ್ನುಅದಲು-ಬದಲು ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
Related Articles
Advertisement
ಕಳೆದ ಎರಡು ಅವಧಿಗೂಜಿಪಂ ಕ್ಷೇತ್ರ ಸ್ಥಾನ ಹೊಂದಿರುವ ಕಲಾದಗಿ, ಈಬಾರಿಯೂ ಮುಂದು ವರಿಯಲಿದೆ. ಈ ಕ್ಷೇತ್ರದಡಿ ಕಲಾದಗಿ,ಕಲಾದಗಿ ಪುಕೇ, ತುಳಸಿಗೇರಿ,ದೇವನಾಳ, ಹಿರೇಸಂಶಿ, ಚಿಕ್ಕಸಂಶಿ, ಸೊಕನಾದಗಿ, ಖಜ್ಜಿಡೋಣಿ,ಅಂಕಲಗಿ, ಉದಗಟ್ಟಿ, ಉದಗಟ್ಟಿಪುಕೇ, ಶಾರದಾಳ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ, ಕಳಸಕೊಪ್ಪ,ಗೋವಿಂದಕೊಪ್ಪ.
ಅಂದಾಜು ಮತದಾರರು: 35,525
ಮುರನಾಳ ಜಿಪಂ ಕ್ಷೇತ್ರ :
ಈ ಕ್ಷೇತ್ರವೂ 3ನೇ ಬಾರಿ ಮುಂದುವರಿಯಲಿದ್ದು, ಇದರಡಿ ಮುರನಾಳ, ವೀರಾಪುರ, ಕೇಸನೂರ, ಬನ್ನಿದಿನ್ನಿ, ಸಿಂದಗಿ ಪುಕೇ,ನಕ್ಕರಗುಂದಿ ಪುಕೇ, ಸಾಳಗುಂದಿ ಪುಕೇ, ಸಿದ್ನಾಳ ಪುಕೇ, ಕದಾಂಪುರ, ಯಂಕಂಚಿ, ಯಂಕಂಚಿ ಪುಕೇ, ಅಂಡಮುರನಾಳ,ಸಿದ್ನಾಳ, ಹೊನ್ನರಳ್ಳಿ, ಸೋರಕೊಪ್ಪ, ಸಿಂದಗಿ, ಸಾಳಗುಂದಿ, ನಕ್ಕರಗುಂದಿ, ಗದ್ದನಕೇರಿ, ದುರ್ಗಾನಗರ (ಗದ್ದನಕೇರಿ ಎಲ್‌ಟಿ), ಯಡಹಳ್ಳಿ, , ಆನದಿನ್ನಿ, ಸಿಮೀಕೇರಿ.
ಅಂದಾಜು ಮತದಾರರು: 28,729
ಶಿಗಿಕೇರಿ ಜಿಪಂ ಕ್ಷೇತ್ರ : ಶಿರೂರ ಪಪಂಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಬದಲುನೀರಲಕೇರಿ ಹೊಸ ಜಿಪಂ ಕ್ಷೇತ್ರ ಮಾಡಲು ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿದ್ದರು.ಆದರೆ, ಜನಸಂಖ್ಯೆ ಆಧಾರದ ಮೇಲೆ ಶಿಗಿಕೇರಿ ಗ್ರಾಪಂವ್ಯಾಪ್ತಿಗೆ ಹೆಚ್ಚಿನ ಸಂಖ್ಯೆ ಇದ್ದು, ನೀರಲಕೇರಿ ಬದಲಾಗಿಶಿಗಿಕೇರಿ ಜಿಪಂ ಕ್ಷೇತ್ರ ರಚಿಸಲು ಹೊಸ ಪ್ರಸ್ತಾವನೆಸಿದ್ಧವಾಗಿದೆ. ಈ ಕ್ಷೇತ್ರದಡಿ ನೀರಲಕೇರಿ, ಮುಚಖಂಡಿ,ಶಿಗಿಕೇರಿ, ಶಿಗಿಕೇರಿ ಪು.ಕೇ, ದುರ್ಗಾದೇವಿನಗರ,ಬೇವಿನಮಟ್ಟಿ, ಬೇವಿನಮಟ್ಟಿ ಪು.ಕೇ, ಮಲ್ಲಾಪುರ,ಬೆನಕಟ್ಟಿ, ಇಂಗಳಗಿ, ಹೊನ್ನಾಕಟ್ಟಿ, ಮನ್ನಿಕಟ್ಟಿ,ಮುಗಳೊಳ್ಳಿ, ಮುಗಳೊಳ್ಳಿ ಪುಕೇ, ಮುಗಳೊಳ್ಳಿ ತಾಂಡಾ-1 ಮತ್ತು 2, ಸಂಗೊಂದಿ, ಭಗವತಿ, ಕಿರಸೂರ
ಅಂದಾಜು ಮತದಾರರು: 32,060
ಬೇವೂರ ಜಿಪಂ ಕ್ಷೇತ್ರ : ಈ ಕ್ಷೇತ್ರದಡಿ ಸೇರ್ಪಡೆ ಮಾಡಲು ನಿರ್ಧರಿಸಿದ್ದಭಗವತಿ ಮತ್ತು ಕಿರಸೂರ ಗ್ರಾಮಗಳನ್ನು ಹೊಸದಾಗಿ ರೂಪುಗೊಳ್ಳಲಿರುವ ಶಿಗಿಕೇರಿ ಜಿಪಂಕ್ಷೇತ್ರಕ್ಕೆ ಸೇರಿಸಲು ಹೊಸ ಪ್ರಸ್ತಾವನೆ ಸಿದ್ಧಗೊಂಡಿದೆ. ಹೀಗಾಗಿ ಈ ಕ್ಷೇತ್ರದಡಿಬೇವೂರ, ಚೌಡಾಪುರ, ಬೆಣ್ಣೂರ, ಬೆಣ್ಣೂರ ಪು.ಕೇ, ಶಿರಗುಪ್ಪಿ, ಶಿರಗುಪ್ಪಿ ಪುಕೇ, ಬೈರಮಟ್ಟಿ, ಸಂಗಾಪುರ, ತಳಗಿಹಾಳ, ಇಲಾಳ, ಜಡ್ರಾಮಕುಂಟಿ,ಜಡ್ರಾಮಕುಂಟಿ ಪುಕೇ, ಕಡ್ಲಿಮಟ್ಟಿ, ಲವಳೇಶ್ವರ ತಾಂಡಾ, ಹಳ್ಳೂರ, ಅಚನೂರ, ಬಿಲ್‌ಕೆರೂರ, ತಿಮ್ಮಾಪುರ, ಮುಡಪಲಜೀವಿ, ಬೋಡನಾಯಕದಿನ್ನಿ, ಬಸವನಗರ.
ಅಂದಾಜು ಮತದಾರರು: 32,331
ರಾಂಪುರ ಜಿಪಂ ಕ್ಷೇತ್ರ : ರಾಂಪುರ, ರಾಂಪುರ ಪು.ಕೇ, ಸೀತಿಮನಿಆರ್.ಎಸ್, ಮಾಸ್ತಿಹಾಳ, ಧರ್ಮನಗರ (ಆಲೂರ ತಾಂಡಾ), ಹಿರೇಗುಳಬಾಳ, ಚಿಕ್ಕಗುಳಬಾಳ, ಮುತ್ತತ್ತಿ, ನಾಯನೇಗಲಿ, ಆಲೂರ, ಹಿರೇಮೂರಮಟ್ಟಿ, ಚಿಕ್ಕಮೂರಮಟ್ಟಿ, ಹೊಸೂರ, ಮನಹಳ್ಳಿ, ನಾಗರಾಳ, ನಾಗಸಂಪಗಿ,ಸೀತಿಮನಿ, ಚಿಕ್ಕ ಸೀತಿಮನಿ, ಬೊಮ್ಮಣಗಿ, ಚಿಕ್ಕಮ್ಯಾಗೇರಿ,ಹಿರೇಮ್ಯಾಗೇರಿ, ಹಂಡರಗಲ್, ಸುತಗುಂಡಾರ, ಡೋಮನಾಳ,ಮಂಕಣಿ, ದೇವಲಾಪುರ, ಹಿರೇಹೊದ್ಲೂರ, ಚಿಕ್ಕಹೊದ್ಲೂರ, ಚಿಟಗಿನಕೊಪ್ಪ, ಮುದುವಿನಕೊಪ್ಪ.
ಅಂದಾಜು ಮತದಾರರು: 28,469
-ಶ್ರೀಶೈಲ ಕೆ. ಬಿರಾದಾರ