Advertisement
– ಶೇಂಗಾ ಬೆಳೆಗೆ ಈ ಮಣ್ಣು ಅತಿ ಸೂಕ್ತವಾಗಿದ್ದು, ಬೇಸಗೆಯಲ್ಲಿ ನೀರಿನ ಲಭ್ಯತೆ ಇರುವವರು ಈ ಬೆಳೆಯನ್ನು ಬೆಳೆಯಬಹುದು. ಬಿತ್ತನೆಯನ್ನು ಜನವರಿ ಮೂರನೇ ವಾರದವರೆಗೆ ಕೈಗೊಳ್ಳಬಹುದು ಬೇಸಿಗೆ ಹಂಗಾಮಿಗೆ ಸೂಕ್ತವಾದ ತಳಿಗಳನ್ನು ಬಳಸುವ ಅವಶ್ಯವಿದ್ದು, ಬಿತ್ತನೆಗೆ ಮುಂಚೆ ಸಾವಯವ ಗೊಬ್ಬರ, ರಸಗೊಬ್ಬರ, ಜಿಪ್ಸಂ ಉಪ್ಪನ್ನು ಭೂಮಿ ಉಳುಮೆಗೆ ಮುಂಚಿತವಾಗಿ ಮಣ್ಣಿನಲ್ಲಿ ಸೇರಿಸುವುದು ಉತ್ತಮ. ಪ್ರತಿ ಎಕರೆಗೆ 50 ಕಿ.ಗ್ರಾಂ ಬೀಜದ ಕಾಳುಗಳನ್ನು ಬಳಸಬೇಕು. ಬೀಜಗಳಿಗೆ ಬೀಜೋಪಚಾರ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು 3 ಗ್ರಾಂ ಕ್ಯಾಪ್ಟನ್ 80 ಡಬ್ಲ್ಯೂ .ಪಿ ಅಥವಾ ಥೈರಾಮ್ 75 ಡಬ್ಲ್ಯೂ .ಪಿ ಅಥವಾ 4 ಗ್ರಾಂ ಟ್ರೆçಕೋಡರ್ಮಾನಿಂದ ಬೀಜೋಪಚಾರ ಮಾಡಿ, ಸೂಕ್ತ ರಸಗೊಬ್ಬರಗಳೊಂದಿಗೆ 30 ಸೆಂ.ಮೀ ಅಂತರವಿರುವ ಕೂರಿಗೆಯಿಂದ ಬಿತ್ತನೆ ಮಾಡಬೇಕು. ಬಾರಂಗಿ ಬಿಡುವ ಸಮಯದಲ್ಲಿ ಸಾಲಿನ ಎರಡು ಪಕ್ಕ ಸರಿಯಾಗಿ ಮಣ್ಣು ಏರಿಸುವುದು ಸೂಕ್ತ. ಬೆಳೆಯ ಸಂದಿಗ್ಧ ಹಂತಗಳಾದ ಹೂವಾಡುವ ಪೂರ್ವಾವಧಿ, ಬಾರಂಗಿ ಬಿಡುವ ಸಮಯ ಹಾಗೂ ಕಾಯಿ ಬಲಿಯುವ ಹಂತದಲ್ಲಿ ನೀರು ಸಿಗುವಂತೆ ನೋಡಿಕೊಳ್ಳುವುದರ ಜೊತೆಗೆ ಸಮಯೋಚಿತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು. ಈ ಮೇಲಿನ ಕ್ರಮಗಳನ್ನು ಕೈಗೊಂಡಲ್ಲಿ ಶೇಂಗಾ ಬೆಳೆಯಲ್ಲಿ ಎಕರೆಗೆ 8- 14 ಕ್ವಿಂಟಾಲ್ ಕಾಯಿ ಇಳುವರಿಯ ಜೊತೆಗೆ, ಅಷ್ಟೇ ಪ್ರಮಾಣದ ದನಕರುಗಳಿಗೆ ಯೋಗ್ಯವಾದ ಪೌಷ್ಠಿಕವಾದ ಶೇಂಗಾ ಬಳ್ಳಿ ಅಥವಾ ಹೊಟ್ಟನ್ನು ಪಡೆಯಬಹುದು.
ಕೃಷಿ ವಿಜ್ಞಾನಿ, ಹಾವೇರಿ