Advertisement

ವಾಹನಗಳಲ್ಲಿ ಕೆಂಪುದೀಪ ಹೋಯ್ತು, ಸೈರನ್‌ ಬಂತು!

11:03 AM May 03, 2017 | Team Udayavani |

ಪಟ್ನಾ/ಮುಂಬಯಿ: ನಮ್ಮ ರಾಜಕಾರಣಿಗಳಿಗೆ “ವಿಐಪಿ ಸ್ಟೇಟಸ್‌’ ಅಂದ್ರೆ ಅದೇಕೆ ಅಷ್ಟು ಇಷ್ಟವೋ ಗೊತ್ತಿಲ್ಲ. “ಅವನು ಚಾಪೆಯಡಿ ನುಸುಳಿದರೆ, ಇವ ರಂಗೋಲಿಯಡಿ ನುಸುಳಿದ’ ಎಂಬಂತೆ ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಕಾರುಗಳಲ್ಲಿನ “ಕೆಂಪುದೀಪ’ ತೆಗೆಸಿ ಎಂದು ಕೇಂದ್ರ ಸರಕಾರ ಹೇಳಿದರೆ, ರಾಜಕಾರಣಿಗಳು ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. 

Advertisement

ಮಧ್ಯಪ್ರದೇಶ, ತೆಲಂಗಾಣದಲ್ಲಂತೂ “ಕೆಂಪು ದೀಪ ಹೋಯ್ತು, ಸೈರನ್‌ ಬಂತು’ ಎಂದು ಜನ ಕೂಗಿಕೊಳ್ಳುವಂತಾಗಿದೆ. ರಾಜಕೀಯ ನಾಯಕರು, ಅಧಿಕಾರಿಗಳು ಕಾರುಗಳಲ್ಲಿ ಕೆಂಪುದೀಪದ ಬದಲಿಗೆ ಸೈರನ್‌ ಅಳವಡಿಸಿಕೊಂಡಿದ್ದಾರೆ. ಸೈರನ್‌ ಕೂಗುತ್ತಾ ವಾಹನ ಸಂಚರಿಸುತ್ತಿದ್ದರೆ, ಎಲ್ಲರೂ ದಾರಿ ಮಾಡಿಕೊಟ್ಟು, “ವಿಐಪಿ’ಯನ್ನು ಗೌರವಿಸುತ್ತಾರೆ ಎಂಬ ವಾದ ಅವರದ್ದು. ಆದರೆ, ನಿಯಮದ ಪ್ರಕಾರ, ತುರ್ತು ವಾಹನಗಳ ಹೊರತಾಗಿ ಬೇರಾರೂ ಸೈರನ್‌ ಬಳಸುವಂತಿಲ್ಲ.ಇನ್ನು ಬಿಹಾರದಲ್ಲಿ ರಾಜಕಾರಣಿಗಳು ತಮ್ಮ “ವಿಐಪಿ ಸ್ಥಾನಮಾನ’ ಬಿಟ್ಟುಕೊಡಲು ಸಿದ್ಧರಿಲ್ಲ. ಇಲ್ಲಿ ಇವರ್ಯಾರೂ ತಮ್ಮ ಕಾರುಗಳ ಕೆಂಪು ದೀಪವನ್ನು ತೆಗೆದುಹಾಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next