ಕಾರವಾರ: ರೆಡ್‌ಕ್ರಾಸ್ ಸಂಸ್ಥಾಪನಾ ದಿನವನ್ನು ರೆಡ್‌ಕ್ರಾಸ್ ಜನಕ ಜೀನ್ ಹೆನ್ರಿ ಡ್ಯೂನಾಂಟ್ರ ಜನ್ಮ ದಿನದಂದೇ ಇಲ್ಲಿನ ಮೆಡಿಕಲ್ ಕಾಲೇಜು ಅಧಿಧೀನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ಹಂಚುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಭಾರತೀಯ ರೆಡ್‌ಕ್ರಾಸ್ ಘಟಕದ ವತಿಯಿಂದ ಆಚರಿಸಲಾಯಿತು.
Advertisement
ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ನಜೀರ್ ಶೇಖ್, ಕಿಮ್ಸ್ ಆಸ್ಪತ್ರೆ ಶಸ್ತ್ರಚಿಕಿತ್ಸಕ ಹಾಗೂ ಮುಖ್ಯಸ್ಥ ಡಾ| ನರೇಶ್ ಪಾವುಸ್ಕರ್ ಮುಖ್ಯ ಅತಿಥಿಗಳಾಗಿ ರೆಡ್‌ಕ್ರಾಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಜಗದೀಶ ಬಿರ್ಕೋಡಿಕರ್ ಜವಾಬ್ದಾರಿ ನಿರ್ವಹಿಸಿದರು. ರೆಡ್‌ಕ್ರಾಸ್ ಮಹಿಳಾ ಮತ್ತು ಮಕ್ಕಳ ವಿಭಾಗದ ಖೈರುನ್ನೀಸಾ ಶೇಖ್, ವಿಪತ್ತು ವಿಭಾಗದ ಮುಖ್ಯಸ್ಥ ಮಾಧವ ನಾಯಕ, ರೆಡ್‌ಕ್ರಾಸ್ ಕೋಶಾಧ್ಯಕ್ಷ ಎಲ್.ಕೆ. ನಾಯ್ಕ, ರಾಜ್ಯ ಸಮಿತಿ ಪ್ರತಿನಿಧಿ ಸದಾನಂದ ನಾಯ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜು ಕಡತೋಕ, ನಾಗರಾಜ ಹರಪನಹಳ್ಳಿ, ಅಲ್ತಾಫ್ ಶೇಖ್, ಸಲೀಂ ಶೇಖ್, ರಾಮಾ ನಾಯ್ಕ, ಆರ್.ಎಸ್. ನಾಯ್ಕ, ಸಂದೀಪ ರೇವಣಕರ್, ಅಮರನಾಥ ಶೆಟ್ಟಿ, ಬಿರ್ಕೋಡಿಕರ್ ಸೇರಿದಂತೆ ರೆಡ್‌ಕ್ರಾಸ್‌ನ ಸದಸ್ಯರು ಸಹ ಭಾಗವಹಿಸಿದ್ದರು.